ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಹ ಹೆಚ್ಚಾಗಿ ತೊಡಗಿಸಿಕೊಳ್ಳಿ: ಮಂಜುನಾಥ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.17-ಮಕ್ಕಳು ವಿದ್ಯಾಭ್ಯಾಸವನ್ನು ಹೊರತುಪಡಿಸಿ ಅದರ ಜೊತೆಗೆ ಕ್ರೀಡೆಯಲ್ಲೂ ಸಹ ಹೆಚ್ಚಾಗಿ ತೊಡಗಿಸಿಕೊಂಡು ಅದರಲ್ಲೂ ಸಾಧನೆ ಮಾಡಬಹುದುಎಂದುನಗರಸಭೆಆರೋಗ್ಯ ಅಧಿಕಾರಿಗಳಾದ ಮಂಜುನಾಥ್ ತಿಳಿಸಿದರು.
ಡ್ರೀಮ್ಸ್ ಟ್ರಸ್ಟ್ ಶ್ರೀ ಪರಿಮಳ ರಾಮ ವಿದ್ಯಾ ಮಂದಿರದಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡು ಯಶಸ್ವಿಗೊಳಿಸಿ, ಚಾಮರಾಜನಗರದ ಹೆಸರನ್ನು ರಾಜ್ಯ ರಾಷ್ಟ್ರಮಟ್ಟ ಅಂತರಾಷ್ಟ್ರೀಯ ಮಟ್ಟಗಳಲ್ಲಿ ವಿದ್ಯಾರ್ಥಿಗಳು ಮಕ್ಕಳು ತೆಗೆದುಕೊಂಡು ಹೋದರೆ ಅವರ ಪೆÇೀಷಕರಿಗೆ ಹಾಗೂ ಶಿಕ್ಷಕರಿಗೂ ಸಹ ಒಂದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಶ್ವ ಕಲಾ ದಿನದ ಪ್ರಯುಕ್ತವಾಗಿ ಕಲಾವಿದರಾದ ಮೊಹಮ್ಮದ್ ಗೌಸ್ ಮಹಮ್ಮದ್ ಪಾμÁ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಡ್ರೀಮ್ಸ್ ಟ್ರಸ್ಟ್ ಪರಿಮಳ ರಾಮ ವಿದ್ಯಾ ಮಂದಿರದ ಮುಖ್ಯಸ್ಥ ಪ್ರದೀಪ್‍ಕುಮಾರ್ ದೀಕ್ಷಿತ್, ಕೃಷಿಕರಾದ ರವಿಚಂದ್ರ, ಪಿಎಲ್‍ಡಿ ಬ್ಯಾಂಕ್ ಮಾಜಿಅಧ್ಯಕ್ಷಮಹದೇವಪ್ಪ, ಮುಖ್ಯ ಅತಿಥಿಗಳಾಗಿ ಪ್ರಕಾಶ್, ನಾಗರತ್ನಮ್ಮ ಮಹಮ್ಮದ್ ಗೌಸ್ ಹಾಗೂ ರಾಮಪ್ರಸಾದ್ ಭಾಗವಹಿಸಿದ್ದರು.