ಯುಪಿಎಸ್ಸಿ ಪರೀಕ್ಷೆ: ವಿಜಯಪುರದ ಇಬ್ಬರ ಅಮೋಘ ಸಾಧನೆವಿಜಯಪುರ ಮೂಲದ ವಿಜೇತಾ 100ನೇ ಯಾರ್ಂಕ್, ಸಂತೋಷ ಶಿರಾಡೋಣ 641ನೇ ರ್ಯಾಂಕ್
ಸಂಜೆವಾಣಿ ವಾರ್ತೆ,
ವಿಜಯಪುರ,ಏ.17:ವಿಜಯಪುರ ಮೂಲದ ಯುವತಿ ವಿಜೇತಾ ಭೀಮಸೇನ ಹೊಸಮನಿ ಯುಪಿಎಸ್ಸಿ ಪರೀಕ್ಷೆಯಲ್ಲಿ 100 ನೇ ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
2020 ರಿಂದ ಮೂರು ಬಾರಿ ಯು.ಪಿ.ಎಸ್.ಸಿ ಪರೀಕ್ಷೆ ಬರೆದಿದ್ದಾರೆ. 2023ರ ಪ್ರಿಲನ್ಮರಿ ಎಕ್ಸಾಂ, ಮೇನ್ ಎಕ್ಸಾಂ ಪಾಸ್ ಆಗಿ ಸಂದರ್ಶನ ಪಾಸ್ ಮಾಡಿ ಈಗ ಉತ್ತೀರ್ಣರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ 100ನೇ ಸ್ಥಾನ ಪಡೆದಿದ್ದಾರೆ.
ಪುತ್ರಿಯ ಸಾಧನೆಗೆ
ಯುವತಿಯ ಪೆÇೀಷಕರು ಫುಲ್ ಖುಷಿ ಆಗಿದ್ದಾರೆ.
ಎಲ್. ಕೆ. ಜಿ ಯಿಂದ 5ನೇ ತರಗತಿವರೆ ವಿಜೇಜಾ ಭೀಮಸೇನ ಹೊಸಮನಿ ವಿಜಯಪುರ ನಗರದ ಸೈನಿಕ ಶಾಲೆಯ ಶಿಶುನಿಕೇತನ ಸ್ಕೂಲ್ ನಲ್ಲಿ ಓದಿದ್ದಾರೆ. 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಪಿಯುಸಿ ಪ್ರಥಮ ವರ್ಷ ವಿಜಯಪುರ ನಗರದ ತುಂಗಳ ಕಾಲೇಜಿನಲ್ಲಿ ಹಾಗೂ ಪಿಯುಸಿ ದ್ವಿತೀಯ ದರಬಾರ ಪಿಯು ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದಾರೆ.
ವಿಜೇತಾ ಭೀಮಸೇನ ಹೊಸಮನಿ
ನಂತರ ಪ್ಲ್ಯಾಟ್ ಎಕ್ಸಾಂ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ
ಬಿ.ಎ ಎಲ್.ಎಲ್.ಬಿ
ಕ್ರಿಮಿನಲ್ ಲಾ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.
ಆನ್ ಲೈನ್ ತರಬೇತಿ ಮತ್ತು ಮನೆಯಲ್ಲಿಯೇ ಹೆಚ್ಚಿನ ಅಭ್ಯಾಸ ಮಾಡುವ ಮೂಲಕ ವಿಜೇತಾ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿಜೇತಾ ಭೀಮಸೇನ ಹೊಸಮನಿ ಅವರಿಗೆ ಇಂಡಿಯನ್ ರೆವೆನ್ಯೂ ಸರ್ವೀಸ್ ನಲ್ಲಿ ಹುದ್ದೆ ಸಿಗುವ ಛಾನ್ಸ್ ಇದೆ.
ಅವರ ತಂದೆ ಭೀಮಸೇನ ಹೊಸಮನಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾರೆ. ಸದ್ಯಕ್ಕೆ ವಿಜೇತಾ ಪೆÇೀಷಕರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ.
ಯುಪಿಎಸ್‍ಸಿಯಲ್ಲಿ 641 ಯಾಂಕ್ ಪಡೆದ ಸಂತೋಷ
ಸಂತೋಷ ಶ್ರೀಕಾಂತ ಶಿರಾಡೋಣ ಅವರು ಯುಪಿಎಸ್ಸಿಯಲ್ಲಿ 641 ಯಾರ್ಂಕ್ ಪಡೆದು ಸಾಧನೆ ಮಾಡಿದ್ದಾರೆ.
ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾಭ್ಯಾಸ ಮಾಡಿದ ಅವರು, 6 ರಿಂದ 8ನೇ ತರಗತಿ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆ ಹಾಗೂ 8 ರಿಂದ ಎಸ್ಸೆಸ್ಸೆಲ್ಸಿ ವಿಜಯಪುರ ತಾಲೂಕಿನ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಪಿಯುಸಿ ಹೈದರಾಬಾದಿನ ಚೈತನ್ಯಾ ಕಾಲೇಜಿನಲ್ಲಿ, ಬೆಂಗಳೂರಿನ ಆರ್‍ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದುಕೊಂಡಿದ್ದಾರೆ. ಇನ್ನು ದೆಹಲಿಯ ವಾದಿರಾಮ್ ಕೋಚಿಂಗ್ ಸೆಂಟರ್‍ನಲ್ಲಿ ತರಬೇತಿ ಪಡೆದಿದ್ದ ಸಂತೋಷ್, 2019 ರಿಂದ ಯುಪಿಎಸ್‍ಸಿಗೆ ಪ್ರಯತ್ನ ಮಾಡಿದ್ದು, ಈಗ ಉತ್ತೀರ್ಣರಾಗಿದ್ದಾರೆ.