ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನದ ಜಾಗೃತಿ.

ಸಂಜೆವಾಣಿವಾರ್ತೆ
ಹರಪನಹಳ್ಳಿ.ಏ.17; ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಹಾಕುವುದರ ಮುಖಾಂತರ ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವೈ.ಎಚ್. ಹೇಳಿದರು.ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಿಹಳ್ಳಿಯ ನಾಲಾದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ತಾಲೂಕು ಪಂಚಾಯಿತಿ ಹಾಗೂ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವೀಪ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ಇರುವುದರಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಭಾರತ ದೇಶವು ಇಡೀ ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಆದರೆ, ಮತದಾನ ಮಾಡುವಲ್ಲಿ ಜನರು ನಿರ್ಲಕ್ಷö್ಯ ತೋರಬಾರದು. 18 ವರ್ಷ ಮೇಲ್ಪಟ್ಟ ಯುವಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಹಾಗೂ ಎಲ್ಲರೂ ಕಡ್ಡಾಯವಾಗಿ ಮೇ 7ನೇ ತಾರೀಖಿನಂದು ಮತದಾನ ಮಾಡಬೇಕು. ಮತದಾನ ಕೇಂದ್ರಕ್ಕೆ ಹೋಗಲು ಸಾಧ್ಯವಾಗದೇ ಅನಾರೋಗ್ಯ ಇದ್ದವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಪ್ಪದೇ ಮತದಾನ ಮಾಡಬೇಕು. ಇನ್ನು ನರೇಗಾ ಕೂಲಿಕಾರರು ಬೆಳಗ್ಗೆ ಆರು ಗಂಟೆಗೆ ಕೂಲಿ ಕೆಲಸ ಮುಗಿಸಿದ ಬಳಿಕ ವಿಶ್ರಾಂತಿ ಪಡೆದು ನಂತರ ಮತದಾನ ಮಾಡುವುದನ್ನು ಮರೆಯಬಾರದು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್ ಪಿಡಿಒ ಹಾಲಪ್ಪ, ತಾಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಬಿಎಫ್‌ಟಿ ಭರಮಪ್ಪ ಸೇರಿದಂತೆ ಗ್ರಾಪಂ ಸಿಬ್ಬಂದಿ, ನರೇಗಾ ಕೂಲಿಕಾರರು ಇತರರಿದ್ದರು.ಚಿಗಟೇರಿಯಲ್ಲಿ ಪ್ರತಿಜ್ಞಾವಿಧಿ; ತಾಲೂಕಿನ ಚಿಗಟೇರಿ ಗ್ರಾಪಂ ವ್ಯಾಪ್ತಿಯ ಚಿಗಟೇರಿ ಗ್ರಾಮದ ನಾಲಾ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳದಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿ ಮತದಾರರ ಜವಾಬ್ದಾರಿ, ಮತದಾನ ಮಹತ್ವದ ಕುರಿತು ಸ್ವೀಪ್ ಜರುಗಿತು. ಈ ಸಂದರ್ಭದಲ್ಲಿ ಚಿಗಟೇರಿ ಗ್ರಾಪಂ ಸಿಬ್ಬಂದಿಗಳಾದ ಮುನಿಯಪ್ಪ, ಸುರೇಶ್, ಬಿಎಫ್‌ಟಿ ಬಸವರಾಜ, ಜಿಕೆಎಂ ಮಾಲತಿ ಸೇರಿದಂತೆ ಇತರರು ಇದ್ದರು.