ನಾಗಠಾಣದಲ್ಲಿ ಶ್ರೀ ಮೌನೇಶ್ವರ ಅದ್ಧೂರಿ ಜಾತ್ರಾ ಮಹೋತ್ಸವ
ವಿಜಯಪುರ,ಏ.16:ತಾಲೂಕಿನ ನಾಗಠಾಣ ಗ್ರಾಮದಲ್ಲಿ ಸೋಮವಾರ ಮೌನೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.
ಜಾತ್ರೆಯ ನಿಮಿತ್ತ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳ ಜೊತೆಗೆ ಸಂಭ್ರಮದಿಂದ ಜರುಗಿತು.
ಮೌನೇಶ್ವರ ಸ್ವಾಮಿಯೊಂದಿಗೆ ಇಡೀ ಶಿಷ್ಯ ಸಮೂಹವೆಲ್ಲಾ ಓಂ ಏಕಲಾಕ ಐಂಸೀ ಹಜಾರ ಮುಶಾ ಪೈಗಂಬರ, ಪಾಂಚೋ ಪೀಠ ಜಗದ್ಗುರು, ಮೌನೇಶ್ವರ ಕಾಶಿಪತಿ ಗಂಗಾಧರ ಹರಹರ ಮಹಾದೇವ ಎಂಬ ಜಯ ಘೋಷಣೆಗಳನ್ನು ಮಾಡುತ್ತ ಹೊರಟಿದ್ದರು.
ಇಂದು ಬೆಳಿಗ್ಗೆಯಿಂದ ಮೌನೇಶ್ವರರ ವಿಶೇಷ ಪೂಜೆ, ಅಗ್ಗಿ ಹಾಯುವದು, ಪುರವಂತರ ಸೇವೆ ಮೈನವಿರೇಳಿಸುವಂತಿತ್ತು. ಸಂಜೆ ವೇಳೆಗೆ ಮೌನೇಶ್ವರರ ಭವ್ಯ ರಥೋತ್ಸವ ಭಕ್ತರ ಜಯಘೋಷಗಳೊಂದಿಗೆ ಸಾಗಿಬಂತು. ಸ್ವತಃ ಭಕ್ತರೇ ರಥವನ್ನು ಎಳೆಯುತ್ತಾ ‘ಮೌನೇಶ್ವರ ಕಿ ಜೈ’ ಎಂದು ಹೇಳುತ್ತಾ ಸಾಗುವ ದೃಶ್ಯ ನೋಡುಗರ ಕಣ್ಮನ ಸೆಳೆಯಿತು. ರಥ ಸಾಗುವಾಗ ಮಹಿಳಾ ಭಕ್ತರು ದೇವರನ್ನು ಸ್ಮರಿಸುತ್ತಾ ರಥದ ಮೇಲೆ ಖಾರೀಕ, ಬದಾಮ, ಉಣ್ಣೆ ಎಸೆಯುವದು ವಿಶೇಷವಾಗಿತ್ತು.
ಮಹಾಬಲೇಶ್ವರ ಆಚಾರ್ಯರು, ಸುಭಾಸ ಬಡಿಗೇರ, ಕಲ್ಯಾಣಿ ಪತ್ತಾರ, ಸುಭಾಸ ಪತ್ತಾರ, ಶ್ರೀಧರ ಬಡಿಗೇರ, ರಮೇಶ ಬಡಿಗೇರ, ರಾಜು ಪತ್ತಾರ, ವಿಶ್ವನಾಥ ಬಡಿಗೇರ, ಮುದಕಣ್ಣ ಬಡಿಗೇರ, ಮಲ್ಲು ಪತ್ತಾರ, ಶ್ರೀಶೈಲ ಪತ್ತಾರ, ಅಶೋಕ ಬಡಿಗೇರ, ಭಗವಂತ ಬಡಿಗೇರ, ಶ್ರೀಶೈಲ ಕತ್ನಳ್ಳಿ ಸೇರಿದಂತೆ ಗ್ರಾಮದ ಸಮಸ್ತ ಭಕ್ತವೃಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.