ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ವಿಶ್ವ ಕಲಾ ದಿನಾಚರಣೆ
ವಿಜಯಪುರ,ಏ.16:ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಸೋಮವಾರ ವಿಶ್ವ ಕಲಾ ದಿನಾಚರಣೆ ಆಚರಿಸಲಾಯಿತು.
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಅವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ನಾಮಿನಿ ಚೇರಮನ್ ಸಂಗನಗೌಡ ನಾಡಗೌಡ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಾಕೃತಿಗಳನ್ನು ರಚಿಸಲು ಯಾವುದೇ ರೀತಿಯ ಬ್ರೆಸ್ ತೆಗೆದುಕೊಳ್ಳದೇ ನಿಸರ್ಗದಲ್ಲಿರುವ ಎಲೆ, ಪೇಪರ್, ವಿವಿಧ ರೀತಿಯ ಬಣ್ಣಗಳನ್ನು ಇನ್ನಿತರ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ಸುಂದರ ಕಲಾಕೃತಿಗಳನ್ನು ರಚಿಸಲಾಯಿತು.
ಶಾಲೆಯ ನಿರ್ದೇಶಕರು ಮತ್ತು ಸಿಎಒ ಎಚ್. ವೆಂಕಟೇಶ ಮತ್ತು ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮೀ ಪಟ್ಟೇದ ಅವರು ಡ್ರಾಯಿಂಗ್ ಸೀಟ್ ಮೇಲೆ ಶ್ರೀಕಾರ ಬರೆದರು.
ಉಪ ಪ್ರಾಂಶುಪಾಲೆ ಶ್ರೀದೇವಿ ಕನ್ನಾಳ, ಉಪ ಪ್ರಾಂಶುಪಾಲ ಮಹೇಶ ಸಂಬಣ್ಣೆ ಹಾಗೂ ಚಿತ್ರಕಲಾ ಶಿಕ್ಷಕ ಬಸವರಾಜ ಹಡಪದ, ಶಾರದಾ ತಡಕಲ್, ವಿಶ್ವನಾಥ ಕೆಂಭಾವಿ, ಪ್ರಭು ಮುದ್ದೇಬಿಹಾಳ, ಅಶ್ವಿನಿ ಅನಂತಪುರ ಹಾಗೂ ಮುದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.