ಜನರು ಬದಲಾವಣೆ ಬಯಸಿದ್ದಾರೆ:ಸಚಿವ ಎಂ.ಬಿ. ಪಾಟೀಲ
ವಿಜಯಪುರ, ಏ.16:ಜಿಲ್ಲೆಯ ಹಾಗೂ ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಸಿದ ಬಳಿಕ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜು ಆಲಗೂರು ಉತ್ತಮ ಕೆಲಸ ಮಾಡುತ್ತಾರೆ.
ಕಾಂಗ್ರೆಸ್ ಪಕ್ಷಕ್ಕೆ ಜಿಲ್ಲೆಯಲ್ಲಿ
ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು‌ ಕಾಂಗ್ರೆಸ್ ಬೆಂಬಲಿಸಿದ್ದಾರೆ ಎಂದರು.
ಹಾಲಿ ಸಂಸದರು ಕೆಲಸ ಮಾಡಿಲ್ಲ. ಲೋಕಸಭೆಯಲ್ಲಿ ಮಾತನಾಡಿಲ್ಲ.
ಆಲಮಟ್ಟಿ ಅಣೆಕಟ್ಟು ಎತ್ತರ ಸಂಬಂಧ ಕೆಲಸ ಮಾಡಿಲ್ಲ.
ತೋಟಗಾರಿಕೆ, ಪ್ರವಾಸೋದ್ಯಮ ಹಾಗೂ ಇತರೆ ಯಾವುದೇ ಕೆಲಸ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಪಾಟೀಲ ಹರಿ ಹಾಯ್ದರು.
ಹತ್ತು ವರ್ಷದಲ್ಲಿ ಮೋದಿ ಆಡಳಿತದಲ್ಲಿ ಕೊಟ್ಟ ಮಾತಿನಂತೆ ನಿರುದ್ಯೋಗಿಗಳಿಗೆ
ಉದ್ಯೋಗ ನೀಡಿಲ್ಲ. ಬೆಲೆ ಏರಿಕೆ ಕೊಡುಗೆ ನೀಡಿದ್ದಾರೆ.
ಕಪ್ಪು ಹಣ ವೈಟ್ ಮಾಡಲು ನೋಟ್ ಬ್ಯಾನ್ ಮಾಡಿದರು.
ಜನರ‌ ಖಾತೆಗೆ ಹಣ ಹಾಕಲಿಲ್ಲ. ಕಪ್ಪು ಹಣ ವಿದೇಶದಿಂದ ತರಲಿಲ್ಲ
ಎಲ್ಲರೂ ಮೋದಿ ಅವರನ್ನು ನಂಬಿದ್ದರು. ಚುನಾವಣೆ ಬಾಂಡ್ ವಿಚಾರದಲ್ಲಿ, ಮೋದಿ ಅವರ ಭೃಷ್ಟಾಚಾರದ ಮುಖವಾಡ ಬಯಲಾಗಿದೆ. ಐಡಿ, ಇಡಿ ಸಿಬಿಐ ದುರ್ಬಳಕೆ ಮಾಡಿದ್ದಾರೆ.
ಲಿಕ್ಕರ್ ಹಗರಣದಲ್ಲಿ ದೆಹಲಿ ಸಿಎಂ ಕ್ರೇಜಿವಾಲ್ ಅವರನ್ನು ಬಂಧಿಸಿದ್ದಾರೆ. ಅದೇ ಲಿಕ್ಕರ್ ಮಾಫಿಯಾಗಳಿಂದ ಬಿಜೆಪಿ ಹಣ ಪಡೆದಿದೆ ಎಂದು ಆರೋಪಿಸಿದರು.
ಐದು ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಂಬಿಕೆ ಬಂದಿದೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆರುವ ದೀಪ. ಆರುವ ಮುನ್ನ ಜೋರಾಗಿ ಉರಿಯುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಅವರು,
ಅವರ ದೀಪ ಎಷ್ಟು ಬಾರಿ‌ ಅರಿಸಲಾಗಿದೆ ಎಂದು ತಿಳಿದುಕೊಳ್ಳಲಿ ಎಂದು ಸಚಿವ ಪಾಟೀಲ ಟಾಂಗ್ ನೀಡಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಎನೆಲ್ಲಾ ಮಾಡಿದ್ದಾರೆ.
ಈ ಚುನಾವಣೆಗೆ ಬಳಕೆ ಮಾಡಿಕೊಳ್ಳಲು ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ.
ವಿಜಯೇಂದ್ರ ಮೂರು ವರ್ಷಗಳ ಕಾಲ ಮಾತ್ರ ಅಧ್ಯಕ್ಷರಾಗಿರುತ್ತಾರೆ ಎಂದು ಅವರ ಪಕ್ಷದ ಪ್ರಹ್ಲಾದ ಜೋಶಿ ಹೇಳಿದ್ದಾರೆ ಎಂದರು.