ಎಸ್‌ ಆರ್‌ ಎಸ್‌ ಚಾಣಕ್ಯ -2024 ಫೌಂಡೇಷನ್‌ ತರಗತಿಗಳು ಆರಂಭ

ಚಿತ್ರದುರ್ಗ. ಏ.೧೬; ಹತ್ತನೇ ತರಗತಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಮುಂದೆ ಪಿಯುಸಿಯಲ್ಲಿ ಕಲಿಯಬೇಕಾದ ವಿಜ್ಞಾನ ವಿಷಯಗಳ ಬಗ್ಗೆ ಚಿತ್ರದುರ್ಗದ ಎಸ್ ಆರ್ ಎಸ್ ಪಿಯು ಕಾಲೇಜಿನಲ್ಲಿ  ನುರಿತ ಅನುಭವಿ ಉಪನ್ಯಾಸಕರಿಂದ ಬಹು ಆಯ್ಕೆ ಮಾದರಿಯಲ್ಲಿ ನೀಟ್‌, ಜೆಇಇ, ಸಿಇಟಿ ಪರೀಕ್ಷೆಗಳಿಗೆ ಅನುಗುಣವಾಗಿ ಸುಮಾರು 25 ದಿನಗಳ ಕಾಲ ನಡೆಯುವ ಚಾಣಕ್ಯ ಫೌಂಡೇಷನ್‌ ತರಗತಿಗಳ ಬೇಸಿಗೆ ಶಿಬಿರ  ಉದ್ಘಾಟನೆಯಾಯಿತು.ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವಿ ಟಿ.ಎಸ್‌ ಅವರು ಓರ್ವ ವ್ಯಕ್ತಿ ಜಗತ್ತಿಲ್ಲಿ ಶ್ರೀಮಂತ ಎನಿಸಿಕೊಳ್ಳಬೇಕಾದರೆ ಹಣದಿಂದಲ್ಲ, ಜ್ಞಾನದಲ್ಲಿ ಶ್ರೀಮಂತನಾಗಬೇಕು ಎಂದು ಹೇಳುತ್ತಾ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.ನೀಟ್‌, ಜಿಇಇ, ತರಬೆತಿಯ ಸಂಚಾಲಕರಾದ ಶ್ರೀನಿವಾಸ ಕುಮಾರ್‌ ಡಿ, ಹಾಗೂ ಅಮಾನ್‌  ಮಾತನಾಡಿ ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಸಂಸ್ಕಾರ ಮುಖ್ಯ ಎಂದು ಹೇಳಿದರು.ಕನ್ನಡ ಉಪನ್ಯಾಸಕರಾದ ಅಣ್ಣಪ್ಪ  ಎಚ್‌. ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.ಉಪ ಪ್ರಾಂಶುಪಾಲರಾದ ಮನೋಹರ ಬಿ  ನೀಟ್‌, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.