57 ಕೆರೆ ಯೋಜನೆ ಕಾಂಗ್ರೆಸ್ ಸರ್ಕಾರದ ಸಾಧನೆ: ಸಚಿವ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ಜಗಳೂರು.ಏ.೧೬ -: ಪಟ್ಟಣದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಬರಪೀಡಿತ ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಯೋಜನೆ ಯನ್ನು ಬಜೆಟ್ ನಲ್ಲಿ ಸೇರ್ಪಡೆಗೊಳಿಸಿದ್ದರಿಂದ ಈ ಭಾಗದ ನೀರಾವರಿ ಕನಸು ನನಸಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದಲ್ಲಿ  ರೋಡ್ ಶೋ ನಂತರ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.57 ಕೆರೆ ಯೋಜನೆ ಪರಿಣಾಮ ಹಿಂದುಳಿದ ಜಗಳೂರು ತಾಲ್ಲೂ ಕಿನಲ್ಲಿ ಈಗಾಗಲೇ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗಿದೆ. 22 ಕೆರೆ ಯೋಜನೆ ಕಳಪೆ ಕಾಮಗಾರಿಯ ಕಾರಣ ಸಫಲವಾಗಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಯಾದಲ್ಲಿ ಇಡೀ ತಾಲ್ಲೂಕು ಸಮಗ್ರ ನೀರಾವರಿಯಾಗಲಿದೆ. ಶಾಸಕ ಬಿ.ದೇವೇಂದ್ರಪ್ಪ ಅವರೊಂದಿಗೆ ಸೇರಿ ಸಮಗ್ರ ನೀರಾವರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುವಂತೆ ಮಾಜಿ ಸಂಸದ ಚನ್ನಯ್ಯ ಒಡೆಯರ್ ಅವರ ಪುತ್ರ ಉದಯ ಶಂಕರ್ ಒಡೆಯರ್ ಹಾಗೂ ಹೊನ್ನಾಳಿಯ ಎಚ್.ಬಿ.‌ಮಂಜಪ್ಪ ಅವರಿಗೆ ಕೇಳಿಕೊಂಡೆ. ಆದರೆ ಬೇರೆ ಬೇರೆ ಕಾರಣಗಳಿಗಾಗಿ ಅವರಾರೂ ಸ್ಪರ್ಧೆಗೆ ಒಪ್ಪಲಿಲ್ಲ. ಟಿಕೆಟ್ ಕೊಡುವಂತೆ ವಿನಯ್ ಕುಮಾರ್ ನನಗೆ ಕೇಳಿದರು. ನಮ್ಮ ಜಿಲ್ಲೆಯವರೇ ಇರುವಾಗ ಹೊರ ಜಿಲ್ಲೆಯವರಿಗೆ ಹೇಗೆ ಕೊಡೋಕಾಗುತ್ತೆ ಅಂತಾ ಹೇಳಿದೆ. ನಮ್ಮ ಜಿಲ್ಲೆಯಲ್ಲಿ ಸಮರ್ಥ ವ್ಯಕ್ತಿಗಳಿಲ್ಲವೇ. ಹೈ ಕಮಾಂಡ್ ಸರ್ವೇ ಮಾಡಿ ಡಾ ಪ್ರಭಾ ಅವರೇ ಅಭ್ಯರ್ಥಿಯಾಗಬೇಕು ಎಂದು ಹೇಳಿದ್ದರಿಂದ ಕೊನೆಗೆ ಒಪ್ಪಿದ್ದು ಎಲ್ಲರೂ ಒಮ್ಮತದಿಂದ ಸಹಕಾರ ನೀಡಿ ಗೆಲ್ಲಿಸಿ ಎಂದು ಸಚಿವ ಎಸ್.ಎಸ್ ಮಲ್ಲಿ ಕಾರ್ಜುನ್ ಮನವಿ ಮಾಡಿದರು”ಶಾಸಕ. ಬಿ. ದೇವೇಂದ್ರಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಈ ಭಾರಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಮರ್ಥ ಅಭ್ಯರ್ಥಿಯಾಗಿದ್ದು, ಜಗಳೂರು ವಿಧಾನ ಸಭಾ ಕ್ಷೇತ್ರದಿಂದ ಕನಿಷ್ಟ 25 ಸಾವಿರ ಮತಗಳ ಲೀಡ್ ಪಡೆಯಲಿದ್ದಾರೆ ಎಂದರು.ಇದೇ ವೇಳೆ ಬಿಜೆಪಿ ಮುಖಂಡರಾದ ಲಿಂಗಣ್ಣನಹಳ್ಳಿ ಕೃಷ್ಣ ಮೂರ್ತಿ, ಕೆಚ್ಚೇನಹಳ್ಳಿ ಸಿದ್ದೇಶ್. ಗಿಡ್ಡನಕಟ್ಟೆ ಕಾಂತರಾಜ್ ಸೇರಿದಂತೆ 150ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.ನಂತರ ಡಾ. ಟಿ.ಜಿ ರವಿಕುಮಾರ್ ಮಾತನಾಡಿ ಬಿಜೆಪಿ ಕ್ಯಾನ್ಸರ್ ಇದ್ದಂತೆ. ಬುಡ ಸಮೇತ ಬಿದ್ದು ಹೋಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಕೆಲವು ವ್ಯಕ್ತಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಪ್ರಾಮಾಣಿಕ ಕಾರ್ಯಕರ್ತರ ಮೇಲೆ ದರ್ಪ, ದೌರ್ಜನ್ಯ ನಡೆಸು್ತತಿದ್ದು, ಅದನ್ನು ಪ್ರತಿಭಟಿಸಿ ಆತ್ಮ ಸಂತೋಷದಿಂದ ನಾನು ಹಾಗೂ ನನ್ನ ತಂದೆ ಟಿ. ಗುರುಸಿದ್ದನಗೌಡ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ. ತವರು ಮನೆಗೆ ಬಂದಷ್ಟು ಸಂತಸವಾಗುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಟಿ. ಗುರುಸಿದ್ದನಗೌಡ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯದ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿ ಕುಮಾರ್. ಕೆಪಿಸಿಸಿ ಸದಸ್ಯ ಕಲ್ಲೇಶ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹ್ಮದ್, ಮಂಜುನಾಥ್, ಉದಯಶಂಕರ್ ಒಡೆಯರ್. ಬಸವಪುರ ರವಿಚಂದ್ರ.ಬಿ ಮಹೇಶ್ವರಪ್ಪ. ಎಸ್ ಕೆ ರಾಮರೆಡ್ಡಿ ಸುರೇಶ್ ಗೌಡ್ರು. ಶಿವನಗೌಡ. ಯಶ್ವಂತ್ ಗೌಡ.ಪ್ರಕಾಶ್.ಪಟ್ಟಣ ಪಂಚಾಯತಿ ಸದಸ್ಯರಾದ ಶಕೀಲ್. ಮಂಜುನಾಥ್. ರವಿಕುಮಾರ್. ರಮೇಶ್ ರೆಡ್ಡಿ. ಮಹಮ್ಮದ್ ಆಲಿ. ಮುಖಂಡರಾದ ಓಮಣ್ಣ.ಪಲ್ಲಾಗಟ್ಟೆ ಶೇಖರಪ್ಪ. ವಿಜಯ್.ಅಹ್ಮದ್ ಅಲಿ.ಮರೇನಹಳ್ಳಿ ರಾಜು . ಮಧುಸೂದನ್. ಮುಷ್ಟೂರಪ್ಪ. ಕೆಚ್ಚೆನಹಳ್ಳಿ ಹರೀಶ್. ಕೊರಟಿಕೆರೆ ಗುರು ಸಿದ್ದನಗೌಡ. ರಮೇಶ್ ಉಪ್ಪಾರ್. ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರು