ನಿಮ್ಮ ಒಂದು ಮತ ದೇಶದ, ಮಹಿಳೆಯರ ರಕ್ಷಣೆಗೆ ಮೀಸಲಿಟ್ಟು ಬಿಜೆಪಿ ಗೆಲ್ಲಿಸಿ : ಗಾಯಿತ್ರಿ ಸಿದ್ದೇಶ್ವರ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ.ಏ.೧೬; ನಿಮ್ಮ ಒಂದು ಮತ ದೇಶದ ರಕ್ಷಣೆ, ಮಕ್ಕಳ ಶಿಕ್ಷಣ, ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಲಿದ್ದು ತಮ್ಮ ಮತದ ಜೊತೆಗೆ ಸ್ಬೇಹಿತರು, ಕುಟುಂಬದವರಿಂದ ಮತ ಹಾಕಿಸಿ ನನ್ನ ಗೆಲುವಿಗೆ ಶ್ರಮಿಸಿ ಎಂದು ಲೋಕಸಬಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.ತಾಲೂಕಿನ ನೀಲಗುಂದ ಗ್ರಾಮದಲ್ಲಿ ದಾವಣಗೆರೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ 60 ವರ್ಷ ಅಧಿಕಾರದಲ್ಲಿದ್ದು ಮಾಡದಷ್ಟು ಅಭಿವೃದ್ದಿ ಕೆಲಸವನ್ನು ನರೇಂದ್ರ ಮೋದಿಯವರು ಸಹ 10ವರ್ಷದಲ್ಲಿ ದೇಶದ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.ಇಂದು ನನ್ನ ಹುಟ್ಟು ಹಬ್ಬವನ್ನು ಯಡಿಯೂರಪ್ಬನವರೊಂದಿಗೆ ಆಚರಿಸಿಕೊಂಡಿರುವುದು ಸೌಭಾಗ್ಯ ವಾಗಿದ್ದು ಈ ವೇಳೆ ತಾವು ಸಹ ಬಿಸಿಲನ್ನು, ಲೆಕ್ಕಿಸದೆ ಅದ್ದೂರಿಯಾಗಿ ನನ್ನನ್ನು ಸ್ವಾಗತಿಸಿದ್ದು ಸಂತಸ ತಂದಿದೆ ಎಂದರು.ಮಾಜಿ ಶಾಸಕ ಜಿ.ಕರುಣಾಕರರೆಡ್ಡಿ, ಮಾತನಾಡಿ ಭಾರತದಲ್ಲಿ ಚುನಾವಣೆ ತಾರಕಕ್ಕೆ ಏರುತ್ತಿದ್ದು, ನರೇಂದ್ರ ಮೋದಿಯವರು ದೇಶದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿ ವಿಶ್ವಕ್ಕೆ ಮಾದರಿ ಯಾಗಿದ್ದಾರೆ.ದೇಶ ಸ್ವಚ್ಚ ವಾಗಿದ್ದರೆ ಅನುಕೂಲ ಎಂದು ಸ್ವಚ್ಚತಾ ಅಭಿಯಾನ ನಡೆಸಿದರು, ಕೋವಿಡ್ ಸಂದರ್ಭದಲ್ಲಿ ಕೋವಿಡ್ ಲಸಿಕೆ ನೀಡಿ ಕೋಟ್ಯಾಂತರ  ಸಾವು, ನೋವುಗಳನ್ನು ತಡೆದಿದ್ದಾರೆ, ಆರೋಗ್ಯಕ್ಕೆ ಒತ್ತು ನೀಡಿದ್ದಾರೆ, ರೈತರಿಗೆ ಕಿಸಾನ ಸನ್ಮಾನ ಯೋಜನೆ ಜಾರಿಗೊಳಿಸಿದ್ದಾರೆ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ಹಣ ವರ್ಗಾವಣೆ ನಿಲ್ಲಿಸಿದ್ದಾರೆ, ರಾಜ್ಯದಲ್ಲಿ ಜಲಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಹಾಗೂ ನೀಲಗುಂದ ಕೆರೆ ತುಂಬಿಸುವ ಯೋಜನೆಯಲ್ಲಿ ತುಂಬಿಸಿದ್ದೇವೆ, ಆಲ್ಲದೇ ದಾವಣಗೆರೆ ಜಿ.ಎಂ.ಸಿದ್ದೇಶ್ವರವರು ಸಂಸದರಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಇದೀಗ ಅವರ ಪತ್ನಿ ಗಾಯಿತ್ರಿ ಸಿದ್ದೇಶ್ವರ ಸಹ ದೇಶದ ಅಭಿವೃದ್ಧಿ ಗೆ ಕಂಕಣಬದ್ದರಾಗಿದ್ದು ನಮ್ಮ ತಾಲೂಕಿನ ಅಭಿವೃದ್ಧಿ ಗೆ ಸಹಕಾರಿಯಾಗಲಿದ್ದು, ಎಲ್ಲರೂ ಮೇ.7ರಂದು ಕಮಲದ ಗುರುತಿಗೆ ಮತ ಹಾಕಿ ಬಹುಮತಗಳಿಮದ ಗೆಲ್ಲಿಸಬೇಕು ಎಂದು ಹೇಳಿದರು.ನೀಲಗುಂದ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿ, ಪ್ರಮುಖ ರಸ್ತೆಯಲ್ಲಿ ರೋಡ್ ಶೊ ನಡೆಸಿದರು.ನಂತರ ಕೂಲಹಳ್ಲಿ, ಮಾಡ್ಲಿಗೇರಿ, ತೋಗರಿಕಟ್ಟಿ, ಕುಂಚೂರು, ನಿಟ್ಟೂರು, ಹಲುವಾಗಲು, ಕೆ.ಕಲ್ಲಹಳ್ಳಿ, ಕಡತಿ, ಸೇರಿದಂತೆ ಇತರೆ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.ಈಸಂದರ್ಭದಲ್ಲಿ ಆರ್.ಲೋಕೇಶ, ಮಂಜುನಾಥ ಆರ್ ನಾಯ್ಕ, ಯಡಿಹಳ್ಳಿ ಶೇಖರಪ್ಪ, ಎಂ.ಮಲ್ಲೇಶ್,  ನೀಲಗುಂದ ತಿಮ್ಮೇಶ, ಮಾಜಿ ಪುರಸಭೆ ಸದಸ್ಯ ವಿಜಯಲಕ್ಷ್ಮಿ, ನಾಗರಾಜ ಪಾಟೀಲ್,  ಸಿದ್ದೇಶರೆಡ್ಡಿ, ತಿರುಪತಿ, ಗುಂಡಿ ಮಂಜಪ್ಪ, ಸೂರ್ಯನಾಯ್ಕ, ಹಾಲಮ್ಮ, ಸುರ್ವಣಮ್ಮ, ಜಿ.ಎಂ.ರೇಖಾ, ಹನುಮಂತ, ಕೊಟ್ರೇಶ, ರಾಜಪ್ಪ,  ಶಿಲ್ಯನಾಯ್ಕ,  ಸೇರಿದಂತೆ ಇತರ ರು ಇದ್ದರು.