ನಾಳೆ ಅಲ್ಲಿಪುರದಲ್ಲಿ ಆಂಜನೇಯ ರಥೋತ್ಸವ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15:  ನಗರದ ಹೊರ ವಲಯದ  ಅಲ್ಲಿ ಪುರ ಗ್ರಾಮದಲ್ಲಿ ನಾಳೆ ಏ.17 ರಂದು  ರಾಮನವಮಿ ಅಂಗವಾಗಿ  ಗ್ರಾಮದ ಆಂಜನೇಯ ಸ್ವಾಮಿ ರಥೋತ್ಸವವು ಜರುಗಲಿದೆ.
ಮಡಿತೇರು  ಬೆಳಗ್ಗೆ 6:05 ನಿಮಿಷಕ್ಕೆ ನಡೆಯಲಿದ್ದು.  ಸಂಜೆ 5:10 ನಿಮಿಷಕ್ಕೆ ಮಹಾರಥೋತ್ಸವ ಗ್ರಾಮದ  ಎಲ್ಲಾ ಭಕ್ತರ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನಡೆಯಲಿದೆಂದು ದೇವಸ್ಥಾನದ ಮುಖ್ಯಸ್ಥರು ತಿಳಿಸಿದ್ದಾರೆ.