ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ
ನರೇಗಲ್ಲ,ಏ.16: : ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ದತ್ತಾತ್ರೇಯ ದೇವಸ್ಥಾನದ ಶ್ರೀ ದತ್ತ ಭಕ್ತ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಶ್ರೀ ದತ್ತ ಭಕ್ತ ಮಂಡಳಿಯ ನೂತನ ಅಧ್ಯಕ್ಷರಾಗಿ ಡಾ. ನಾಗರಾಜ ಗ್ರಾಮಪುರೋಹಿತ, ಉಪಾಧ್ಯಕ್ಷರಾಗಿ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಸಹಕಾರ್ಯದರ್ಶಿ ಪ್ರಕಾಶ ಕಾಳೆ, ಖಜಾಂಚಿಯಾಗಿ ಮಂಜುನಾಥ ಗ್ರಾಮಪುರೋಹಿತ, ಸಹಖಜಾಂಚಿ ಉದಯ ಸೌದಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಸಂಜೀವ ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀವಲ್ಲಭಭಟ್ಟ ಸದರಜೋಷಿ, ಶೇಷಗಿರಿ ಕುಲಕರ್ಣಿ, ಎಸ್.ಎಚ್ ಜೋಷಿ, ಬಿ.ಎಲ್ ಕುಲಕರ್ಣಿ, ಎ.ಜಿ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಅರುಣ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಆರ್.ಡಿ ಕುಲಕರ್ಣಿ, ಎಸ್.ಎಚ್ ಕುಲಕರ್ಣಿ, ಗುರುರಾಜ ಕುಲಕರ್ಣಿ, ಸುನೀಲ ಅಂಬೇಕರ, ಅಜೀತ ಕುಲಕರ್ಣಿ, ಕೃಷ್ಣ ಗ್ರಾಮಪುರೋಹಿತ, ಅರುಣ ಸೂರಭಟ್ಟನವರ, ಮುಕುಂದ ಸೂರಭಟ್ಟನವರ, ಕೆ.ಬಿ ದೇಸಾಯಿ, ಪ್ರಶಾಂತ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಚಂದ್ರಾಮ ಗ್ರಾಮಪುರೋಹಿತ, ಶಂಕರರಾವ ಕುಲಕರ್ಣಿ, ಬಾಬು ಕಾಳೆ, ಜಗನ್ನಾಥ ಸೂರಭಟ್ಟನವರ, ರಾಮಕೃಷ್ಣ ಸದರಜೋಷಿ ಪವನ ಗ್ರಾಮಪುರೋಹಿತ ಸೇರಿದಂತೆ ಇತರರಿದ್ದರು.