ಗ್ಯಾರೇಜ್‍ಗೆ ಬೆಂಕಿ: 15 ಲಕ್ಷ ಹಾನಿ
ಕಲಬುರಗಿ,ಸೆ.20-ಇಲ್ಲಿನ ವಿದ್ಯಾನಗರದಲ್ಲಿರುವ ಗ್ಯಾರೇಜ್ ಒಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಗ್ಯಾರೇಜ್‍ನಲ್ಲಿದ್ದ ವಸ್ತುಗಳು ಸುಟ್ಟು 10 ರಿಂದ 15 ಲಕ್ಷ ರೂ.ಹಾನಿ ಸಂಭವಿಸಿದ ಘಟನೆ ಗುರುವಾರ ನಡೆದಿದೆ.
ಮಹೇಶ್ ಹಡಗಿಲ್ ಎಂಬುವರಿಗೆ ಸೇರಿದ ಗ್ಯಾರೇಜ್ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.