ಗುರುವಂದನೆ, ಪತ್ರಕರ್ತರಿಗೆ ಸನ್ಮಾನ
ಕಮಲನಗರ,ಸೆ 20 ತಾಲೂಕಿನ ಡಾ.ಚನ್ನಬಸವ ಪಟ್ಟದ್ದೇವರ ಪ್ರೌಢ ಶಾಲೆ, ಶ್ರೀ ಗುರಪ್ಪಾ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಸ್ಕೂಲ್‍ನಲ್ಲಿ ಗುರುವಂದನಾ ಮತ್ತು ಪತ್ರಕರ್ತರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಶಿಕ್ಷಕರು ಕಲಾವಿದನಾಗಿ ಒಳ್ಳೆಯ ಸಂಸ್ಕಾರ, ಉತ್ತಮ ಶಿಕ್ಷಣ ನೀಡಿ ಎಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ. ಬಸಲಿಂಗ ಪಟ್ಟದ್ದೇವರು ನುಡಿದರು.ಮುಂದಿನ ಭವಿಷ್ಯ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಸವಣ್ಣ, ಡಾ ಬಿ ಆರ್ ಅಂಬೇಡ್ಕರ್ ಅಂತಹ ಮಹನೀಯರ ಆದರ್ಶಗಳನ್ನು ರೂಪಿಸುವ ಕಲೆಗಾರಿಕೆ ಶಿಕ್ಷಕನಲ್ಲಿ ಇರಬೇಕು.ಒಳ್ಳೆಯ ಜೀವನದ ಮೌಲ್ಯಗಳು ಸಂಸ್ಕಾರಗಳು ದಯೆ ಪ್ರೀತಿ ಪ್ರೇಮ ಅಂತಃಕರಣದಿಂದ ಒಳಗೊಂಡಿರಬೇಕು. ಮಕ್ಕಳಿಗೆ ಮೌಲಿಕವಾಗಿರುವ ಕಥೆಗಳ ದೃಷ್ಟಾಂತಗಳನ್ನು ಹಾಸ್ಯದೊಂದಿಗೆ ತಿಳಿಹೇಳಿದರು. ಯಾರು ಹುಟ್ಟಿದವರು ದಡ್ಡರಲ.್ಲ ಮಕ್ಕಳಿರುವ ಪ್ರತಿಭೆಯನ್ನು ಹೊರ ತೆಗೆಯುವ ಕಲೆ ಶಿಕ್ಷಕನಲ್ಲಿ ಇರಬೇಕು ಅದಕ್ಕಾಗಿ ಶಿಕ್ಷಕರು ಪೂರ್ವಸಿದ್ಧತೆಯಿಂದ ಕೂಡಿರಬೇಕು ಎಂದು ಕಿವಿಮಾತು ಹೇಳಿದರು. ಪ್ರಾಸ್ತಾವಿಕವಾಗಿ ಶಾಲೆಯ ಆಡಳಿತಾಧಿಕಾರಿ ಚನ್ನಬಸವ ಘಾಳೆ ಮಾತನಾಡಿದರು.ನಿವೃತ ಶಿಕ್ಷಕರಾದ ರಾಜೇಂದ್ರ ಬಿರಾದರ ಹೊರಂಡಿ, ಶಶಿಕುಮಾರ ಕಟ್ಟೆ , ಪ್ರಶಾಂತ ರೆಡ್ಡಿರವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಶಿವಾನಂದ ವಡ್ಡೆ ಉದ್ಘಾಟನೆ ನೆರವೇರಿಸಿದರು. ಹಿರಿಯ ಸಾಹಿತಿ ತಾನಾಜಿ ಕಟ್ಟೆ ಅವರು ಶ್ರೀಗಳ ಬಗ್ಗೆ ಬರೆದ ಕವನ ವಾಚಿಸಲಾಗಿತು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಿವಕುಮಾರ್ ಕಟ್ಟೆ ಪ್ರಶಾಂತ್ ರೆಡ್ಡಿ ರಾಜೇಂದ್ರ ಬಿರಾದಾರ್ ಪ್ರಾಂಶುಪಾಲ ಶ್ರೀಧರ ರೆಡ್ಡಿ ಉಪಸ್ಥಿತರಿದ್ದರು.
ಸಂಜುಕುಮಾರ ಹಡಪದ, ಪಲ್ಲವಿ ನಾಯ್ಕ, ಶೇಖರ ಚಂದ್ರಕಾಂತ ಗಳಗೆ, ವಿಜಯಕುಮಾರ ಶೆಗೆದಾರ, ವಿಶಾಲ ಸೋಲಾಪುರೆ, ಕಾಮಾಕ್ಷಸುತ್ತಾರ, ವಿಜಯಲಕ್ಷಮಿ ಎಕಲಾರೆ, ರಾಜೇಶ್ರ ಸಿರಸಿಗೆ, ರಾಜೇಶ್ವರಿ ಬಿರಾದಾರ, ರಂಜನಾ ಪಾಟೀಲ, ಶಿವಲಿಲಾ ದರೆಗಾವೆ, ಶೋಭಾ ಪಾಟೀಲ, ಜ್ಯೋತಿ ಘಾಳೆ, ಗ್ರೇಸ್.ಡಿ.ಎಮ್, ಶಿವಕುಮಾರ ಎಕಲಾರೆ, ಮೇಘರಾಜ ಪವಾರ, ಹಾವಗಿರಾವ ಮಠಪತಿ , ಅನೇಕರು ಶಾಲಾ ಪಾಲಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಶಾಲಾ ಮಕ್ಕಳು ಹಾಜರಿದ್ದರು.ಪ್ರಥಮೇಶ ಮಾಧವರಾವ್ ಹಾಗೂ ಸಮೀಕ್ಷಾ ಸಂತೋಷ್ ಸ್ವಾಗತಿಸಿದರು. ವೈಷ್ಣವಿ ಶಿವಕುಮಾರ್ ಹಾಗೂ ಮಾನಸಿ ವಿಕಾಸ ನಿರುರೂಪಿಸಿದರು .ಲಕ್ಷ್ಮೀ ಪಾಂಡುರಂಗ ವಂದನಾರ್ಪಣೆ ಮಾಡಿದರು.
ಗುರುವಂದನಾ ಕಾರ್ಯಕ್ರಮದಲ್ಲಿ ವಿಶೇಷ 41 ಪುಷ್ಪಗಳಿಂದ ಭಕ್ತಿಯ ಪೂಜೆ ನೆರವೇರಿತು .
ಪತ್ರಕರ್ತರಿಗೆ ಗೌರವ ಸನ್ಮಾನ:
ಚಂದ್ರಕಾಂತ್ ಗಳಗೆ, ಮನೋಜ್ ಹಿರೇಮಠ, ಬಾಲಾಜಿ ಪಿರಂಗೆ, ಗಣಪತಿ ಕುರನಾಳೆ ,ಎಸ್ ಎಸ್ ಮೈನಾಳೆ, ಭಾವುರಾವ ಹೇಡೆ, ಮಹಾದೇವ ಬೀರಾದಾರ್, ಅನಿಲ್ ಕುಲಕರ್ಣಿ, ಸಂಜು ಕುಮಾರ್ ನವಾಡೇ, ಶಿವಕುಮಾರ್ , ಸಂಗಮೇಶ್ವರ ಎಸ್ ಮುರ್ಕೆ, ಪರಮೇಶ್ವರ ರಾಂಪುರೆ ಅವರು ಗೌರವ ಸನ್ಮಾನ ಸ್ವೀಕರಿಸಿದರು.