ಕೊಡದೂರ; ಹಾದಿ ಬಸವೇಶ್ವರ ಖಾಂಡ ಉತ್ಸವ
ಕಾಳಗಿ:ಸೆ.20: ತಾಲೂಕಿನ ಕೊಡದೂರ ಗ್ರಾಮದ ಭಕ್ತರೇಲ್ಲರು ಹಾದಿ ಬಸವೇಶ್ವರ ಖಾಂಡ ಉತ್ಸವ ಸಂಭ್ರಮದಿಂದ ನೆರವೇರಿಸಿದರು.
ವೇದ ಮೂರ್ತಿ ಶಿವನಂದಯ್ಯ ಸ್ವಾಮಿಜಿ ರವರ ವೈದಿಕತ್ವದಲ್ಲಿ ಹಾದಿ ಬಸವೇಶ್ವರ ದೇವರ ಮೂಲ ಮೂರ್ತಿಗೆ ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ ಜಲಾಭಿಷೇಕ ಸೇರಿದಂತೆ ವಿವಿಧ ರೀತಿಯ ಪೂಜೆ ಕೈಂಕರ್ಯಗಳು ನೆರವೇರಿಸಿದರು.
ದೇವಸ್ಥಾನದ ಸಮಿತಿ ಸದಸ್ಯರು ಗ್ರಾಮಸ್ಥರೇಲ್ಲರು ಸೇರಿ ಸಜ್ಜಕಾ ಅನ್ನದ ಪ್ರಸಾದವನ್ನು ನೈವೇದ್ಯ ಸಮರ್ಪಿಸಿ ನಂತರ ಪ್ರಸಾದಕ್ಕೆ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆನೀಡಿದರು.
ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಸಂಭ್ರಮದಿಂದ ಪ್ರಸಾದ ಸ್ವಿಕರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಸಮಿತಿ ಪ್ರಮುಖರಾದ, ಶರಣಪ್ಪ ಗದ್ದಿ, ಶರಣಪ್ಪ ಹಡಪದ, ಕಾಶೀನಾಥ್ ಗುಂಡಗುರ್ತಿ, ಜಗನಾಥ ಯಡಗಿ, ಬಾಬುರಾವ, ಹಣಮಂತ ಸರಡಗಿ, ಬಸವರಾಜ ವಟವಟಿ, ಬಸವರಾಜ ರಾಜಾಪುರ, ರೇವಣಸಿದ್ದಪ್ಪ ಪಸಪೂರ, ಶಿವಕುಮಾರ ಗುಂಡಗುರ್ತಿ, ಬಸವರಾಜ ಗದ್ದಿ, ವಿಜಯಕುಮಾರ ಸಂಗ್ಯದ, ಅಣ್ಣಪ್ಪ ಭಂಡಿ, ಡಾ.ಗುರನಾಥ ಮಂಗಲಗಿ, ಸಂಗಣ್ಣ ರಾಜಾಪುರ, ಶರಣು ನಾಗೂರ, ಬಂಡು ಗದ್ದಿ ಸೇರಿ ಇತರರಿದ್ದರು.