ದಕ್ಷಿಣ ಆಫ್ರಿಕಾದಲ್ಲಿ ಬಸವ ತತ್ವ ಪ್ರಚಾರ ಕೈಗೊಂಡ ಪೂಜ್ಯ ಚನ್ನಬಸವಾನಂದ ಸ್ವಾಮಿಜೀಗೆ ಸನ್ಮಾನ
ಬೀದರ :ಸೆ.20: ಬೆಂಗಳೂರು ಮತ್ತು ಬೀದರ ಬಸವ ಮಂಟಪ ಪೀಠಾಧಿಪತಿಗಳಾದ ಪೂಜ್ಯ ಚನ್ನಬಸವಾನಂದ ಸ್ವಾಮಿ ಅವರು ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಬಸವ ತತ್ವ ಪ್ರಚಾರ ಕಾರ್ಯಕ್ರಮ ಆಯೋಜಿಸಿರುವ ಪ್ರಯುಕ್ತ ಇಂದು ಅವರನ್ನು ಪೆÇ್ರ. ಎಸ್.ವಿ.ಕಲ್ಮಠ ಅವರು ನಗರದ ವಿವೇಕಾನಂದ ಬಡಾವuಯಲ್ಲಿರು ತಮ್ಮ ಪಂಚಾಕ್ಷರ ನಿಲಯಕ್ಕೆ ಕರೆಸಿ ಗೌರವ ಸನ್ಮಾನ ಮಾಡಿದರು. ಪೂಜ್ಯರು ದೆಹಲಿಯಲ್ಲಿ 1996 ರಿಂದ 2007ರ ವರೆಗೆ ದೆಹಲಿಯಲ್ಲಿ ಬಸವ ಮಂಟಪವನ್ನು ಕಟ್ಟಿ ಬೆಳೆಸಿರುತ್ತಾರೆ. ಮುಂಬೈ, ಹೈದ್ರಾಬಾದ , ಪುಣೆ, ಕರಾಡ, ಬಿಹಾರ ದೇಶದ ವಿವಿಧ ರಾಜ್ಯ ಹಾಗು ನಗರಗಳಲ್ಲಿ ಬಸವ ತತ್ವ ಪ್ರಚಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ. ನೇಪಾಳದಲ್ಲಿ ಬಸವ ತತ್ವ ಪ್ರಚಾರ ಕೈಗೊಂಡಿರುತ್ತಾರೆಂದು ಕಲ್ಮಠ ಅವರು ನುಡಿದರು.
ಸನ್ಮಾನ ಸ್ವೀಕರಿಸಿ ಪೂಜ್ಯರು ಮಾತನಾಡುತ್ತ ಬರುವ 2025ರ ಮೇ ತಿಂಗಳಲ್ಲಿ ಲಂಡನ್‍ನಲ್ಲಿ ವಿಶ್ವ ಮಟ್ಟದ ಬಸವ ತತ್ವ ಪ್ರಚಾರ ಸಮ್ಮೇಳನ ಆಯೋಜಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 250 ಬಸವ ಅಭಿಮಾನಿಗಳು ಸಮ್ಮೇಳನದಲ್ಲಿ ಭಾಗವಹಿಸಲು ಹೆಸರನ್ನು ನೋಂದಾಯಿಸಿರುತ್ತಾರೆಂದು ಅವರು ತಿಳಿಸಿದರು.
ಹಿರಿಯ ಕಲಾವಿದರಾದ ಪಂ. ರಾಜೇಂದ್ರಸಿಂಗ್ ಪವಾರ ,ಹಿರಿಯ ಸಾಹಿತಿ ವಿ.ಎಮ್.ಡಾಕುಳಗಿ , ಮಲ್ಲಿಕಾರ್ಜುನ ಮಠ, ಮಹೇಶ ಮಠ, ರಾಮಲಿಂಗ ಸ್ವಾಮಿ, ಸಂಗೀತಾ, ಪೂಜಾ ಮು|ಂತಾದವರು ಸನ್ಮಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.