ತುರವಿಹಾಳ ಠಾಣೆ : ಸಿಐಎಸ್‌ಎಫ್ ತಂಡದಿಂದ ರೂಟ್ ಮಾರ್ಚ್
ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೬- ತಾಲೂಕಿನ ತುರವಿಹಾಳ ಠಾಣೆ ಪಿಎಸ್‌ಐ ನಾಗರಾಜ ಅವರ ನೇತೃತ್ವದಲ್ಲಿ ಸಿ.ಐ.ಎಸ್.ಎಫ್ ತಂಡ ಹಾಗೂ ತುರವಿಹಾಳ ಪೋಲಿಸರು ರೂಟ್ ಮಾರ್ಚ್ ನ್ನು ತುರವಿಹಾಳ ಪಟ್ಟಣ ಹಾಗೂ ಎಲೆಕೂಡ್ಲಿಗಿ ಗ್ರಾಮದಲ್ಲಿ ನಡೆಸಲಾಯಿತು ಎಂದು ತಿಳಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಸರಳ, ಶಾಂತ ರೀತಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ‘ಮುಕ್ತವಾಗಿ ಮತದಾನ ಮಾಡಿ ನಿಮ್ಮ ಜೊತೆ ನಾವಿದ್ದೆವೆ’ ಎಂಬ ಸಂದೇಶವನ್ನು ಸಾರುವ ಮೂಲಕ ಮಧ್ಯಾಹ್ನ ತುರವಿಹಾಳ ಠಾಣೆ ವ್ಯಾಪ್ತಿಯ ಎಲೆ ಕೂಡ್ಲಿಗಿ ಗ್ರಾಮದಲ್ಲಿ ಹಾಗೂ ಸಂಜೆ ತುರವಿಹಾಳ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಜಾಗೃತಿ ಯನ್ನು ಸಿ.ಐ.ಎಸ್ ಎಫ್ ತಂಡದ ೨೧ ಜನ ಹಾಗೂ ಪೋಲಿಸರು ನಡೆಸಿದರು.
ಜಾಥಾದಲ್ಲಿ ಗ್ರಾಮೀಣ ಸಿಪಿಐ ಸುನೀಲ್ ಮೂಲಿಮನಿ ಪಿಎಸ್‌ಐಡಿ ಸ್ಯಾಮುಯಲ್, ಸಿಬ್ಬಂದಿ ಸಿಐಎಸ್‌ಎಫ್‌ನ ಎಎಸ್‌ಐ ಮಹೇಶ್ ಹಾಗೂ ಪೋಲಿಸರು ಜಾಥಾ ನಡೆಸಿದರು.