ಬಿಜೆಪಿ ಅಭ್ಯರ್ಥಿ ಪರ ಶಾಸಕ ಶಿವರಾಜ್ ಪಾಟೀಲ್ ಪ್ರಚಾರ
ರಾಯಚೂರು,ಏ.೧೬-
ರಾಯಚೂರು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿಂದು ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೀಕಲಪರ್ವಿ, ರಂಗದಾಳ್, ಮದ್ಲಾಪುರ , ಕಾತರಿಕಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಯಾದ ರಾಜಾ ಅಮರೇಶ್ವರ ನಾಯಕರ ಅವರ ಪರವಾಗಿ ಪ್ರಚಾರ ಕೈಗೊಳ್ಳಲಾಯಿತು.
ಲೋಕಸಭೆ ಚುನಾವಣೆಯಲ್ಲಿ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ ಎಂಬ ಗ್ಯಾರೆಂಟಿಯೊಂದಿಗೆ ಬೋಗಸ್ ಗ್ಯಾರೆಂಟಿ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷ ಮನಬಂದಂತೆ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಮನೆ ಮನೆಗೂ ಬೋಗಸ್ ಗ್ಯಾರೆಂಟಿ ಕಾರ್ಡ್ ಹಂಚುವ ಮೂಲಕ ಮತದಾರರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.
ದೇಶವನ್ನು ಆಳುವುದು ಎಂದರೆ ಅದು ಅಧಿಕಾರದ ವೈಭೋಗವಲ್ಲ. ದೇಶವನ್ನು ಆಳುವುದು ಅಂದರೆ ಜನರ ಬದುಕನ್ನ ಕಟ್ಟಿಕೊಡುವ ಜವಾಬ್ದಾರಿ.
ಆದರೆ ಕಾಂಗ್ರೆಸ್ ಪಕ್ಷ ೬೦ ವರ್ಷಗಳ ಕಾಲ ಈ ದೇಶವನ್ನ ಹಾಳು ಮಾಡಿದೆಯೇ ಹೊರತು ಜನರ ಬದುಕಲ್ಲಿ ಯಾವುದೇ ಬದಲಾವಣೆ ತಂದಿಲ್ಲ.
ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ ಹೆಚ್.ಡಿ ದೇವೇಗೌಡರವರು.
ನಿನ್ನೆ ಮೈಸೂರಿನಲ್ಲಿ ಹೇಳಿದಂತೆ ಮೋದಿ ಅವರು ನಮ್ಮ ದೇಶಕ್ಕೆ ಗೌರವ ತರುವಂಥ ಕೆಲಸ ಮಾಡಿದ್ದಾರೆ.
ಮುಂದಿನ ಐದು ವರ್ಷಗಳ ಕಾಲ ನಮ್ಮ ದೇಶ ಇನ್ನಷ್ಟು ವೇಗವಾಗಿ ಬೆಳೆಯಬೇಕು ಅಂದರೆ ಮೋದಿ ಅವರಿಗೆ ೪೦೦ ಸೀಟು ಕೊಟ್ಟು ಅವರ ಕೈ ಬಲಪಡಿಸಬೇಕು.
ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಮೋದಿ ಅವರು ನಿರ್ಮಿಸಿರುವ ನೂತನ ರಾಮಮಂದಿರದ ಉದ್ಘಾಟನೆಗೆ ಕಾಂಗ್ರೆಸ್ ಪಕ್ಷದ ಅಥವಾ IಓಆI ಮೈತ್ರಿಕೂಟದ ಯಾವ ನಾಯಕರೂ ಹೋಗಲಿಲ್ಲ.
ನಮ್ಮ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಹಾಲು ಜೇನಿನಂತೆ ಬೆರೆತು ಮನೆ ಮನೆಗೂ ಭೇಟಿ ಕೊಟ್ಟು ಈ ಎಲ್ಲ ವಿಷಯಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಬೇಕು.
ಮೋದಿಗೆ ಮತ, ದೇಶಕ್ಕೆ ಹಿತ ಎಂಬುದನ್ನು ಮನವರಿಕೆ ಮಾಡಬೇಕು. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿ ಮೋದಿ ಅವರಿಗೆ ಶಕ್ತಿ ತುಂಬಬೇಕು.