೭೦೫ ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ
ರಾಯಚೂರು.ಏ.೧೬- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೭೦೫ ನೇ ದಿನಕ್ಕೆ ಮುಂದುವರೆದಿದೆ.
ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಐಐಟಿ ಇಂದ ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ.ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಆರಿಫ್ ಮಿಯಾ ನೆಲಹಾಳ, ಜಸವಂತ ರಾವ್ ಕಲ್ಯಾಣಕಾರಿ, ವೆಂಕಯ್ಯ ಶೆಟ್ಟಿ ಹೊಸಪೇಟೆ, ವೆಂಕಟರೆಡ್ಡಿ ದಿನ್ನಿ, ಶ್ರೀನಿವಾಸ್ ನಾಗಲದಿನ್ನಿ, ಪರಶುರಾಮ್, ನರಸಪ್ಪ ಬಾಡಿಯಾಲ, ಅಶ್ವತ್ ರಾವ್, ಸಾಧಿಕ್ ಖಾನ್, ಸಂತೋಷ್ ಜೈನ್, ನಿತಿನ್ ಶಕ್ತಿನಗರ ,ಮಲ್ಲಿಕಾರ್ಜುನ, ಬೆಟ್ಟಪ್ಪ ಹೊಕ್ರಾಣಿ ಮುಂತಾದವರು ಭಾಗವಹಿಸಿದ್ದರು.