ಕುಮಾರ ನಾಯಕ ಪರ ದದ್ದಲ್ ಕ್ಷೇತ್ರದಲ್ಲಿ ಮತಯಾಚನೆ
ರಾಯಚೂರು,ಏ.೧೬- ಗಿಲ್ಲೇಸೂಗೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೀರಾಪೂರ, ಮೂಡಲದಿನ್ನಿ ಮತ್ತು ಕಟಕನೂರು ಹಾಗೂ ಹನುಮಪೂರ ಗ್ರಾಮಗಳಲ್ಲಿ ಶಾಸಕ ಬಸನಗೌಡ ದದ್ದಲ್ ಅವರು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ, ಜನಾರ್ದನಗೌಡ, ನಾಗೇಂದ್ರಪ್ಪ, ಬಷೀರ್, ನಾರಾಯಣ ವಕೀಲ, ಉಮೇಶ್ ಗೌಡ, ತಿಮ್ಮಪ್ಪ ಆಲ್ಕೂರ, ಶಿವಪ್ಪ ನಾಯಕ, ಕೆ.ಈರಣ್ಣ, ರಮೇಶ್ ರೋಸ್ಲಿ, ನಜೀರ್ ಸಾಬ್, ಮುಕ್ಕಣ್ಣ, ಶಿವು, ಬಸನಗೌಡ, ಮಲೇಶ, ನರಸಿಂಹ ಖಾನಾಪೂರ, ನಾಗೇಶ್ ನಾಯಕ್, ಚಂದ್ರಪ್ಪ, ಲಕ್ಷಣ, ಊರಿನ ಹಿರಿಯ ಮುಖಂಡರುಗಳು ಸುತ್ತ-ಮುತ್ತಲಿನ ಗ್ರಾಮಗಳ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.