ಮೆಂಬ್ರೇನ್ ಆಕ್ಸಿಜನ್ ಕಾರ್ಯಾಗಾರ
ಸಂಜೆವಾಣಿ ವಾರ್ತೆ
ಮೈಸೂರು: ಏ.16:- ನಗರದ ಹೃದಯ ಭಾಗದಲ್ಲಿರುವ ಸದರ್ನ್ ಸ್ಟಾರ್ ಹೊಟೇಲ್‍ನಲ್ಲಿ ವೈದ್ಯಕೀಯ ವೃತ್ತಿಯಲ್ಲಿರುವವರಿಗಾಗಿ ಭಾರತೀಯ ಕ್ರಿಟಿಕಲ್ ಕೇರ್ ಮೆಡಿಸಿನ್ ಸೊಸೈಟಿಯ ಮೈಸೂರು ಶಾಖೆ ವತಿಯಿಂದ ಮಿಡಿತಾ ಲೈಫ್‍ಕೇರ್ ಕಂಪನಿ ಆಶ್ರಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ವಿಧಾನವಾದ ಎಕ್ಸಾಟ್ರ ಕಾಪೆರ್Çರಿಯಲ್ ಮೆಂಬ್ರೇನ್ ಆಕ್ಸಿಜನ್ ಕುರಿತಂತೆ 4 ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಮೈಸೂರು ಹಾಗೂ ಅದರ ಹೊರಗಿನ ವೈದ್ಯರಿಗೆ ಪ್ರದೇಶದಲ್ಲಿ ತುರ್ತು ಕಾಳಜಿ ಕುರಿತಂತೆ ಅರಿವು ಮೂಡಿಸಲಾಯಿತು. ಇದರ ಜೊತೆಗೆ, ಎಕೋಕಾರ್ಡಿಯೋಗ್ರಫಿ ಇನ್ ಕ್ರಿಟಿಕಲ್ ಕೇರ್ ಕುರಿತು ಮತ್ತೊಂದು ಕಾರ್ಯಾಗಾರವನ್ನು ಆರ್ಯ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಅಧ್ಯಕ್ಷತೆ ಉಪ ಪೆÇಲೀಸ್ ಮಹಾರ ನಿರೀಕ್ಷಕ ರಾಜೇಂದ್ರ ಪ್ರಸಾದ್ ವತಯಿಸಿದ್ದರು.
ಇನ್ನು, ಎಕ್ಮೊ ಕುರಿತು ನಡೆದ ವಿಸ್ತೃತ ಚರ್ಚೆ ವೇಳೆ ಪ್ರಾಯೋಗಿಕ ಮಾಹಿತಿ ಒದಗಿಸಲಾಯಿತು. ಇದರಲ್ಲಿ ಸಂಬಂಧಿತ ಕ್ಷೇತ್ರಗಳ ತಜ್ಞ ವೈದ್ಯರಾದ ಡಾ.ಜೆ. ವೀನು, ಡಾ.ಡಿ. ಶಶಿರೇಖಾ, ಡಾ. ಮಧುಪ್ರಕಾಶ್, ಡಾ. ಅಚಲ್ ಶಂಕರಯ್ಯ ಅವರು ವಿಷಯ ಕುರಿತಂತೆ ಮಹತ್ವದ ಮಾಹಿತಿ ನೀಡಿದರು.ಕಿ ?ರಟಿಕಲ್ ಕೇರ್ ಕಾರ್ಯಾಗಾರದಲ್ಲಿ ಎಕೊ ಕಾರ್ಡಿಯೊಗ್ರಫಿಯನ್ನು ಎಕ್ಕೊ ಸೇವೆ ಒದಗಿಸುವ ಮಿಡಿತಾ ಲೈಫ್ ಕೇರ್ ಕಂಪನಿಯು ಆರ್ಯ ಆಸ್ಪತ್ರೆಯಲ್ಲಿ ನಡೆಸಿಕೊಟ್ಟಿತು
ಕಾರ್ಯಾಗಾರವು ವೈದ್ಯಕೀಯ ಸಮುದಾಯ ಎದುರಿಸುತ್ತಿರುವ ವಿಷಯ ಕುರಿತು, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಎಕ್ಮೊ ಸಾಧನ ಕೊರತೆ ಬಗ್ಗೆ ಬೆಳಕು ಚೆಲ್ಲಿತು. ಅಲ್ಲದೆ, ಈ ಜೀವ ರಕ್ಷಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಧನದ ಕೊರತೆಯಿಂದಾಗಿ ಎದುರಾಗಿರುವ ಸವಾಲು ಹಿನ್ನೆಲೆಯಲ್ಲಿ ಲಭ್ಯವಿರುವುದನ್ನೇ ಬಳಸಿಕೊಳ್ಳುವ ಮೂಲಕ ಹಾಗೂ ಮಿಡಿತಾ ಲೈಫ್ ಕೇರ್ ಮತ್ತು ಎಕ್ಮೊ ಬಳಸಿಕೊಂಡು ಹೇಗೆ ಈ ಕಂದಕ ನಿವಾರಿಸಿಕೊಳ್ಳಬಹುದಾಗಿದೆ ಎಂಬ ವಿವರ ನೀಡಲಾಯಿತು. ಈ ಸಹಭಾಗಿತ್ವವು ಸಕಾಲಿಕವಾಗಿ ತುರ್ತು ಕಾಳಜಿ ಸಮಸ್ಯೆ ಹೋಗಲಾಡಿಸುವುದಷ್ಟೇ ಅಲ್ಲ, ಬದಲಾಗಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ವಿಕೇಂದ್ರೀಕರಣಕ್ಕೂ ನೆರವಾಗಲಿದೆ ಎಂಬ ಮಾಹಿತಿ ನೀಡಲಾಯಿತು.
ಇನ್ನು, ಕಾರ್ಯಾಗಾರ ಸಮಾರೋಪಗೊಳ್ಳುವ ವೇಳೆ ಎಕ್ಮೊ ಸಾಧನ ಅಥವಾ ತಂತ್ರಜ್ಞಾನದ ಬಗೆಗಿನ ವಿಸ್ತೃತ ಮಾಹಿತಿ ಒದಗಿಸಲಾಯಿತು. ಈ ವೇಳೆ ಮಿಡಿತಾ ಲೈಫ್‍ಕೇರ್ ಎಕ್ಸಪರ್ಟ್ ಡಾ. ರಘುನಾಥ್ ಮಾತನಾಡಿ, ರೋಗಿಯ ಆರೋಗ್ಯ ಚೇತರಿಕೆಯಲ್ಲಿ ಇಂತಹ ಅತ್ಯಾಧುನಿಕ ಎಕ್ಮೊ ವಿಧಾನದ ಬಳಕೆಯ ಮಹತ್ವ ವಿವರಿಸಿದರು. ಜೊತೆಗೆ, ಇಎಸ್‍ಸಿಸಿಎಂ ಮೈಸೂರು ಶಾಖೆ ಅಧ್ಯಕ್ಷ ಡಾ.ಕೆ. ಮಹದೇವನ್ ಮಾತನಾಡಿ, ಈ ಪ್ರದೇಶದಲ್ಲಿ ಎಕ್ಮೊ ಬಳಕೆಯು ಭವಿಷ್ಯದ ಉಪಕ್ರಮವಾಗಿದೆ ಎಂದರಲ್ಲದೆ, ಒಟ್ಟಾರೆಯಾಗಿ ನಾವು ಎಕ್ಮೊ ಪ್ರಾಮುಖ್ಯತೆ ಅರಿಯುವ ಮೂಲಕ ರೋಗಿಯ ಕಾಳಜಿ ವಹಿಸುವುದರೊಡನೆ ಸಾರ್ವಜನಿಕ ಆರೋಗ್ಯವನ್ನು ಅರ್ಥಪೂರ್ಣವಾಗಿ ರಕ್ಷಿಸಿಕೊಳ್ಳಬಹುದಾಗಿದೆ ಎಂದರು.
ಈ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಆರ್ಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಕೆ.ಎನ್. ಮಹೇಶ್, ಈ ಕ್ಷೇತ್ರದಲ್ಲಿ ಗಣನೀಯ ಪರಿಣತಿ ಹೊಂದಿರುವ ಡಾ. ಹೇಮಾ, ಎಸ್, ಡಾ. ವೀಣು. ಜೆ, ಡಾ. ಶಶಿರೇಖಾ. ಡಾ. ಮಧುಪ್ರಕಾಶ್, ಡಾ. ವೀಣಾ ನಂಜಪ್ಪ, ಡಾ.ಜೆ. ವೀಣು, ಡಾ.ಎ. ರಘುನಾಥ್ ಮೊದಲಾದವರು ಎಕ್ಮೊ ಕುರಿತಂತೆ ಸಮಗ್ರ ಮಾಹಿತಿ ಹಂಚಿಕೊಂಡರು.