ಜನರ ಪ್ರೀತಿ ವಿಶ್ವಾಸದಿಂದ ಗೆಲುವು ಸುಲಭ ಸಾಧ್ಯ; ಗಾಯತ್ರಿ ಸಿದ್ದೇಶ್ವರ್

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೬ : ಲೋಕಸಭಾ ಕ್ಷೇತ್ರದ ಜನ ನನ್ನನ್ನು ಮಗಳು, ತಾಯಿ, ಅಕ್ಕ-ತಂಗಿ ರೀತಿ ಕಾಣುತ್ತಿದ್ದಾರೆ. ಎಲ್ಲ ಕಡೆಯು ಉತ್ತಮ ಸ್ಪಂದನೆ ಇದೆ. ನಾನು ಭೇಟಿ ಕೊಟ್ಟ ಪ್ರತಿ ಗ್ರಾಮದಲ್ಲೂ ಮತದಾರರು ನಗು ಮೊಗದಿಂದ ಸ್ವಾಗತಿಸುತ್ತಿದ್ದಾರೆ. ನಾವು ಗೆಲ್ಲುವುದರಲ್ಲಿ ಯಾವುದೇ ಸಂದೇಶವಿಲ್ಲ ಎಂದು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.
ಸೋಮವಾರ ಬೆಳಗ್ಗೆ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ನನಗೇನು ಹೊಸದಲ್ಲ. 30 ವರ್ಷಗಳಿಂದ ಮಾವನವರ, ಪತಿ ಸಿದ್ದೇಶ್ವರ್ ಅವರ ಚುನಾವಣೆ ಮಾಡಿಕೊಂಡು ಬಂದಿದ್ದೇನೆ. ಇಷ್ಟು ದಿನ ತೆರೆ ಮರೆಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ತೆರೆಯ ಮುಂದೆ ಬಂದಿದ್ದೇನೆ. ಜನ ತುಂಬ ಆದರದಿಂದ ಸ್ವಾಗತ ಮಾಡುತ್ತಿದ್ದಾರೆ ಎಂದರು.