ದುರ್ಮಾರ್ಗಕ್ಕೆ ಹಲವು ದಾರಿ ಆದರೆ ಸನ್ಮಾರ್ಗಕ್ಕೆ ಒಂದೇ ದಾರಿ;  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಕಲಘಟಗಿ.ಏ.೧೬; ಮಾನವ ಜೀವನದ ಉನ್ನತಿಗೆ ಧರ್ಮ ದಿಕ್ಸೂಚಿ. ಧರ್ಮದ ಆದರ್ಶ ಮೌಲ್ಯಗಳನ್ನರಿತು ಬಾಳಿದರೆ ಜೀವನ ಸಮೃದ್ಧ. ದುರ್ಮಾರ್ಗಕ್ಕೆ ಹಲವಾರು ದಾರಿ ಆದರೆ ಸನ್ಮಾರ್ಗಕ್ಕೆ ಇರುವುದೊಂದೇ ದಾರಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಮತ್ತು ನಂದೀಶ್ವರ ನೂತನ ದೇವಾಲಯದ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಅವಿನಾಶಿಯಾದ ಸತ್ಯ ಶಿವನ ಮೊರೆ ಹೊಕ್ಕರೆ ಚಿಂತೆ ಭೀತಿ ದೂರ. ಸತ್ಯವೇ ಶಾಶ್ವತ ಎಂದು ತಿಳಿದು ಆ ದೇವರ ಮೇಲೆ ಅಚಲ ಭಕ್ತಿ ಶ್ರದ್ಧೆಯನ್ನಿಡಬೇಕು. ಅಧಿಕಾರ ಕೀರ್ತಿ ಧನ ಕನಕ ವಸ್ತು ವಾಹನ ಮತ್ತು ದೇಹ ಸೌಖ್ಯಕ್ಕಾಗಿ ಬಡಿದಾಡಿ ಮಡಿದವರೆಷ್ಟೋ ಜನ. ಅವರೆಲ್ಲರೂ ಕಾಲ ಗರ್ಭದಲ್ಲಿ ಮರೆಯಾಗಿ ಹೋದರು. ಜಗದ ಜನರಿಗೆ ಬೆಳಕು ತೋರುವ ಜೀವನ ಸಾಗಿಸಿದ ಆಚಾರ್ಯರು ಋಷಿ ಮುನಿಗಳು ಮತ್ತು ಸಂತ ಮಹಾತ್ಮರ ಮಾತುಗಳನ್ನು ಯಾರೂ ಮರೆಯುವುದಿಲ್ಲ. ಬದುಕು ಸುಖ ದು:ಖ, ನೋವು ನಲಿವು, ಮಾನ ಅಪಮಾನ, ಜಯ ಅಪಜಯ ಮೊದಲಾದ ದ್ವಂದ್ವಗಳಿAದ ಕೂಡಿದೆ. ಜೀವನ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಸ್ವಾಭಿಮಾನದ ಕೊರತೆಯಿಂದಾಗಿ ಮನುಷ್ಯ ಅನೇಕ ನೋವು ಅನುಭವಿಸುತ್ತಿದ್ದಾನೆ. ಪ್ರತಿಯೊಬ್ಬರಲ್ಲಿ ದೇಶಾಭಿಮಾನ ಮತ್ತು ಧರ್ಮಾಭಿಮಾನ ಬೆಳೆದುಕೊಂಡು ಬರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ತಾತ್ವಿಕ ಸಮಾಜ ಕಟ್ಟಿ ಬೆಳೆಸಲು ಅನೇಕ ನೀತಿ ಸೂತ್ರಗಳನ್ನು ನೀಡಿದ್ದು ಅವುಗಳನ್ನು ಪರಿಪಾಲಿಸಿ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬೇಕಾಗಿದೆ. ಗ್ರಾಮದ ಎಲ್ಲ ಜನರ ಸಹಕಾರದಿಂದ ಸುಂದರ ದೇವಾಲಯ ನಿರ್ಮಿಸಿದ್ದು ತಮಗೆ ಹರುಷ ತಂದಿದೆ ಎಂದರು.ಮುಕ್ತಿಮಂದಿರ ಕ್ಷೇತ್ರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಕಲಘಟಗಿ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು,ರಾಯನಾಳ ಅಭಿನವ ರೇವಣಸಿದ್ದೇಶ್ವರ ಸ್ವಾಮಿಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಶಂಕರಯ್ಯ ಹಿರೇಮಠ ಮತ್ತು ಈರಯ್ಯ ಗುರನಳ್ಳಿಮಠ ಇವರು ದೇವತಾ ಪ್ರತಿಷ್ಠಾಪನೆಯ ಎಲ್ಲ ವೈದಿಕ ಕಾರ್ಯಗಳನ್ನು ನೆರವೇರಿಸಿದರು. ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಎಂ.ಆರ್.ತೋಟಗAಟಿ ಸಂಗಡಿಗರಿAದ ಪ್ರಾರ್ಥನಾ ಗೀತೆ ಜರುಗಿತು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಂಭ್ರಮದ ಅಡ್ಡಪಲ್ಲಕ್ಕಿ ಮಹೋತ್ಸ ಜರುಗಿತು.