ಚುನಾವಣಾ ವೆಚ್ಚ ವೀಕ್ಷಕರ ಆಗಮನ: ಚುನಾವಣಾವೆಚ್ಚಕ್ಕೆ ಸಂಬಂಧಿಸಿದಂತೆ ಅಹವಾಲು ಸಲ್ಲಿಕೆಗೆ ಅವಕಾಶ
ಕಲಬುರಗಿ:ಏ.15:ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ಭಾರತ ಚುನಾವಣಾ ಆಯೋಗವು 05-ಗುಲಬರ್ಗಾ (ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಕಂದಾಯ ಸೇವೆ (ಐ.ಆರ್.ಎಸ್.) ಅಧಿಕಾರಿಯಾದ ಸಿ. ಧರಣಿನಾಥ ವಿ.ಎಸ್. ಅವರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಿದೆ ಎಂದು ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಚುನಾವಣಾ ವೆಚ್ಚ ವೀಕ್ಷಕರು ಕಲಬುರಗಿ ಐವಾನ್ ಶಾಹಿ ಅತಿಥಿ ಗೃಹದ ರೂಮ್ ನಂ. 4 ರಲ್ಲಿ ತಂಗಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಏನೆ ಅಹವಾಲುಗಳಿದ್ದಲ್ಲಿ ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ವೆಚ್ಚ ವೀಕ್ಷಕರ ಮೊಬೈಲ್ ಸಂಖ್ಯೆ 7483760308 ಇರುತ್ತದೆ ಎಂದು ಅವರು ತಿಳಿಸಿದ್ದಾರೆ.