ಮಲ್ಲಿಕಾರ್ಜುನ ದೇವರ 60ನೇ ಜಾತ್ರಾ ಮಹೋತ್ಸವ
ಕಲಬುರಗಿ:ಏ.15:ತಾಲೂಕಿನ ಸ್ಟೇಷನ್ ಬಬಲಾದ ಶ್ರೀ ಮಲ್ಲಿಕಾರ್ಜುನ ದೇವರ 60ನೇ ಜಾತ್ರಾ ಮಹೋತ್ಸವ ಹಾಗೂ ಶ್ರೀ ರಾಮ ಜನ್ಮೋತ್ಸವ ತೊಟ್ಟಿಲು ಕಾರ್ಯಕ್ರಮ ಎಪ್ರೀಲ್ 17ರಂದು ಜರುಗುವುದು.
ಪರಮ ಪೂಜ್ಯ ಲಿಂ. ಶ್ರೀ ಸಿದ್ಧಲಿಂಗ ಶಿವಯೋಗಿಗಳ ಸತ್ ಸಂಕಲ್ಪದೊಂದಿಗೆ ಮಠಾಧ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಎಪ್ರೀಲ್ 17 ಬುಧವಾರದಂದು ಬೆಳಿಗ್ಗೆ ರುದ್ರಾಭಿಷೇಕ ನಂತರ 9 ಗಂಟೆಗೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಶ್ರೀ ರಾಮ ಜನ್ಮೋತ್ಸವ ತೊಟ್ಟಿಲು ಕಾರ್ಯಕ್ರಮ ಹಾಗೂ ಸಾಯಂಕಾಲ 6 ಗಂಟೆಗೆ ರಥೋತ್ಸವ ಜರುಗುವುದು. ನಂತರ ರಾತ್ರಿ “ಮಾತು ಬಿದ್ದಿತು ಮೌನ ಗೆದ್ದಿತು” ಎಂಬ ಕೌಟುಂಬಿಕ ನಾಟಕ ಜರುಗುವುದು. ಈ ಕಾರ್ಯಕ್ರಮಕ್ಕೆ ಅನೇಕ ಮಠಾಧೀಶರು, ರಾಜಕೀಯ ಗಣ್ಯರು ಸುತ್ತ ಮುತ್ತಲಿನ ಸಕಲ ಸದ್ಭಕ್ತರು ಪಾಲ್ಗೊಳ್ಳುವರು ಎಂದು ಶ್ರೀ ಮಠದ ಸದ್ಭಕ್ತರಾದ ಸಿದ್ರಾಮಪ್ಪ ಆಲಗೂಡಕರ ತಿಳಿಸಿದ್ದಾರೆ.