ಅಂಜುಟಗಿ ಗ್ರಾ.ಪಂ ಬೀಗ ಹಾಕಿ ಪ್ರತಿಭಟನೆ
ಇಂಡಿ:ಏ.15:ಡಾ. ಬಿ.ಆರ್.ಅಂಬೇಡ್ಕರರ ಜಯಂತಿಗೆ ಪಿಡಿಒ ಶರಣಬಸಪ್ಪ ಶಿವಣಗಿ ಇವರು ಬಾರದ ಹಿನ್ನೆಲೆಯಲ್ಲಿ ಅಂಜುಟಗಿ ಗ್ರಾ.ಪಂ ಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಂತರ ಗ್ರಾಮಸ್ಥರೆಲ್ಲರು ಸೇರಿ ಪಿಡಿಒ ಅನುಪಸ್ಥಿತಿಯಲ್ಲಿ ಅಂಬೇಡ್ಕರ ಜಯಂತಿ ಆಚರಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಅಂಜುಟಗಿ ಗ್ರಾ.ಪಂ ಗೆ ಆಗಮಿಸಿದ ತಹಸೀಲ್ದಾರ ಮಂಜುಳಾ ನಾಯಕ ಪ್ರತಿಭಟನಾಕಾರರಿಗೆ ಸ್ಪಂದಿಸಿ ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು.
ಪಿಡಿಒ ಅಂಬೇಡ್ಕರರ ಜಯಂತಿಗೆ ಹಾಜರಾಗದೇ ಇರುವ ಬಗ್ಗೆ ಕಾರಣ ಕೇಳಿ ನೋಟಿಸನೀಡಲಾಗುವದು. ಮತ್ತು ಸೂಕ್ತ ಕ್ರಮ ಕೈಕೊಳ್ಳಲಾಗುವದು
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ