ಭಾವೈಕ್ಯತೆಯ ಶಾಂತಿಯ ನೆಲೆ ಮಳಖೇಡ ದರ್ಗಾ: ಗುರುಲಿಂಗ ಮಹಾಸ್ವಾಮಿಗಳು
ಸೇಡಂ,ಎ,15:ಕಲ್ಯಾಣ ಕರ್ನಾಟಕದ ಭಾವೈಕ್ಯತೆಯ ಶಾಂತಿಯ ನೆಲೆಯ ಕೇಂದ್ರ ಬಿಂದು ಮಳಖೇಡ ದರ್ಗಾದಲ್ಲಿ ಅಡಗಿದೆ ಎಂದು ವಿರಕ್ತಮಠ ಮೋರಟಗಿ ಹಾಗೂ ಪ್ರಭು ಮಠ ಯಲ್ಲಗೋಡದ ಶ್ರೀಗಳಾದ ಗುರುಲಿಂಗ ಮಹಾಸ್ವಾಮಿಗಳು ಹೇಳಿದರು.
ಮಳಖೇಡದ ದರ್ಗಾದ ಬಾಬರಾದ ಹಜರತ್ ಸೈಯದ್ ಶಾಹ ಖಲಿಫತ್ ಉರ್ ರಹಮಾನ್ ಖಾದ್ರಿ, ಮತ್ತು ಹಜರತ್ ಅಲಹಜ್ ಸೈಯದ್ ನೇಮತುಲ್ಲಾ ಖಾದ್ರಿ ಅಲ್ ಜಿಲಿ ರವರ ಜಾತ್ರಾ ಮಹೋತ್ಸವ ನಿಲ್ಲಿಸುವಂತಹ ಪ್ರಯತ್ನ ದುಷ್ಟ ಶಕ್ತಿಗಳಿಂದ ನಡೆಯುತ್ತಿದೆ ಸುತ್ತಮುತ್ತಲಿನ ದರ್ಗಾದ ಭಕ್ತರು, ರಾಜಕಾರಣಿಗಳು ಮಠಾಧೀಶರು ಎಚ್ಚೆತ್ತುಕೊಳ್ಳಬೇಕಿದೆ.
ಪರಮ ಪೂಜ್ಯ ಶ್ರೀ ಗುರುಲಿಂಗ ಮಹಾಸ್ವಾಮಿಗಳು
ಮಾನವನಲ್ಲಿ ಅಡಗಿಕೊಂಡಿರುವಂತಹ ದುಷ್ಟ ಶಕ್ತಿಗಳನ್ನು ಶಮನಗೊಳಿಸಲು ಮಠ ಮಂದಿರದ ಧರ್ಮ ಗುರುಗಳು ಒಂದೆಡೆ ಸಮ್ಮಿಲನಗೊಂಡು ಚರ್ಚಿಸಿ ತಡೆಯುವಂತ ಪ್ರಯತ್ನ ಮಾನವ ಧರ್ಮ ಚಿಂತನ ಸಭೆಯ ಮುಖ್ಯ ಉದ್ದೇಶ.
ಹಜರತ್ ಸೈಯದ್ ಶಾಹ ಮುಸ್ತಫ ಖಾದ್ರಿ ಸಜ್ಜಾದ್ ನಾಸೀರ್
ಮಳಖೇಡ ದರ್ಗಾದ ಬಾಬರು