ಸಂಭ್ರಮದಿಂದ ಜರುಗಿದ ನೀಲೂರ ನಿಂಬೆಕ್ಕ ದೇವಿಯ ರಥೋತ್ಸವ
ಅಫಜಲಪುರ: ಏ.15:ತಾಲೂಕಿನ ಸುಕ್ಷೇತ್ರ ನೀಲೂರು ಗ್ರಾಮದ ಶಿವಶರಣೆ ನಿಂಬೆಕ್ಕ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ರಥೋತ್ಸವವು ಸಹಸ್ರಾರು ಭಕ್ತರ ಜಯಘೋಷ ಮಧ್ಯೆ ವಾದ್ಯ ಮೇಳಗಳೊಂದಿಗೆ ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ನೆರವೇರಿತು.
13 ದಿನಗಳ ಪರಿಯಂತ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಶಿವಶರಣೆ ನೀಲೂರ ನಿಂಬೆಕ್ಕ ದೇವಿಯ ಪುರಾಣವನ್ನು ಶರಣಕುಮಾರ ಶಾಸ್ತ್ರಿಗಳು ಹಿರೇಮಠ ಹಿತ್ತಲ ಶಿರೂರ, ಸಂಗೀತವನ್ನು ಪ್ರಭುಕುಮಾರ ಗವಾಯಿಗಳು ಮದರಿ ಹಾಗೂ ತಬಲಾ ಸಾಥಿಯನ್ನು ಲಕ್ಷ್ಮಣ ಹೇರೂರ ನಡೆಸಿಕೊಟ್ಟರು.
ಏ. 2 ರಂದು ಆರಂಭವಾದ ಪುರಾಣ ಪ್ರಾರಂಭೋತ್ಸವ ಉದ್ಘಾಟನೆಯನ್ನು ಆಳಂದ ತಾಲೂಕಿನ ಪುರಸಭೆ ಅಧ್ಯಕ್ಷೆ ಜಯಶ್ರೀ ಶ್ರೀಶೈಲ ಖಜೂರೆ ನೆರವೇರಿಸಿದರು. ಏ. 12 ರಂದು ಪುರಾಣ ಮಹಾಮಂಗಲ ಹಾಗೂ ಧರ್ಮಸಭೆ, 13 ರಂದು ಸಾಯಂಕಾಲ ಭವ್ಯ ರಥೋತ್ಸವ ಹಾಗೂ 14 ರಂದು ಜಂಗಿ ಕುಸ್ತಿ ಹಾಗೂ ಪಲ್ಲಕ್ಕಿ ಉತ್ಸವ ಸಾಂಗವಾಗಿ ಜರುಗಿದವು.
ಈ ವೇಳೆ ನೀಲೂರಿನ ಬಂಗಾರ ಜಡೆಯ ನೀಲಕಂಠೇಶ್ವರ ಗೋಣಿರುದ್ರೇಶ್ವರ ಹಿರೇಮಠದ ಧರ್ಮಾಧಿಕಾರಿ ಶ್ರೀ ಶರಣಯ್ಯ ಸ್ವಾಮಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ
ಜಿ.ಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೇದಾರ,
ಡಾ. ಮಹಾಂತಪ್ಪ ಹಾಳಮಳ್ಳಿ, ಭಗವಂತರಾವ ಕಾಮಜಿ, ಮಲ್ಲಿನಾಥ ಹಾಳಮಳ್ಳಿ, ಶರಣಬಸಪ್ಪ ಪದಕಿ, ಸಾಯಬಣ್ಣಾ ಹೂಗಾರ, ಮಲ್ಲಿನಾಥ ಅಷ್ಟಗಿ, ಸಂಗಮನಾಥ ಹೂಗಾರ, ಶಾಂತು ಅಷ್ಟಗಿ, ಚಂದ್ರಕಾಂತ ಲೋಣಿ, ಬಾಹುರಾವ ಕುಲಕರ್ಣಿ, ಶಿವಪುತ್ರ ಕುಂಬಾರ, ಅಶೋಕ ಹೂಗಾರ, ಶಿವಲಿಂಗಪ್ಪ ಮುಗದಿ, ಶರಣು ಹಾಳಮಳ್ಳಿ, ಉಮೇಶ ಗುತ್ತೇದಾರ ಸೇರಿದಂತೆ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.