ಅನ್ನಪೂರ್ಣೇಶ್ವರಿ ಕಾಲೋನಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಯಂತಿ ಆಚರಣೆ
ಕಲಬುರಗಿ :ಏ.15: ನಗರದ ನಗರದ ಶ್ರೀ ಅನ್ನಪೂರ್ಣೇಶ್ವರಿ ಕಾಲೋನಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿಯ ಅಂಗವಾಗಿ ಬಾಬಾ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ 133ನೇ ಜನ್ಮದಿನ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಲೋನಿಯ ಹಿರಿಯರಾದ ಮಹದೇವಪ್ಪ, ಶಾಂತಕುಮಾರ, ಜಕ್ಕಪ್ಪ ,ಹಣಮಂತ ಮರಡಿ,ಬಸವರಾಜ.ಎಸ್.ಡಿ.ಪಾಟೀಲ,ಮಲ್ಲಿಕಾರ್ಜುನ ಖಜೂರಿ, ರಾಜಶೇಖರ,ಯುವ ಮುಖಂಡರಾದ ನಾಗೇಶ ಪೂಜಾರಿ , ರಘುವೀರ, ಅಭಿಷೇಕ, ಪ್ರವೀಣ,ಜಗದೀಶ ಹಾಗೂ ಕಾಲೋನಿಯ ಎಲ್ಲಾ ನಿವಾಸಿಗಳು ಉಪಸ್ಥಿತರಿದ್ದರು.