ಸತ್ಯ ಶುದ್ಧ ಕಾಯಕವಿದ್ದಲ್ಲಿ ದೇವರ ಫಲ ನಿಶ್ಚಿತ : ಹಾರಕೂಡ ಶ್ರೀ
ಬೀದರ್:ಏ.15: ಮನುಷ್ಯ ತನ್ನ ಜೀವನ ನಿರ್ವಹಣೆಗಾಗಿ ಒಂದಿಲೊಂದು ವೃತ್ತಿಯನ್ನು ಅವಲಂಬಿಸಿರುವುದು ಸಹಜ, ಮಾಡುವ ಕೆಲಸದಲ್ಲಿ ಪ್ರಾಮಾಣಿಕ ಪರಿಶ್ರಮ, ಸತ್ಯಶುದ್ಧತೆ ಇದ್ದಲ್ಲಿ ಲಕ್ಷ್ಮಿ ದೇವಿಯ ಫಲ ನಿಶ್ಚಿತ ಎಂದು ಹಾರಕೂಡದ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಬಸವಕಲ್ಯಾಣ ತಾಲೂಕಿನ ಗದಲೇಗಾಂವ ಬಿ. ಗ್ರಾಮದ ಶ್ರೀ ಮಹಾಲಕ್ಷ್ಮಿ 3ನೇ ಜಾತ್ರಾ ಮಹೋತ್ಸವ ನಿಮಿತ್ಯ ಶುಕ್ರವಾರ ಸಾಯಂಕಾಲ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ನಾವು ನಂಬಿದ ದೈವ ಸನ್ನಿಧಿಗೆ ಸಾಮೂಹಿಕವಾಗಿ ಭಕ್ತಿಯನ್ನು ಅರ್ಪಿಸುವ ಸಮರ್ಪಕ ವ್ಯವಸ್ಥೆಯೇ ಜಾತ್ರೆ.
ಇಡೀ ಗ್ರಾಮದ ಎಲ್ಲಾ ಮನಸ್ಸುಗಳು ಒಂದೆಡೆ ಸೇರಿ ಬಾಂಧವ್ಯದ ಸುಧೆ ಹರಿಸುವ ಸಂಭ್ರಮದ ಆಚರಣೆಯೊಂದಿದ್ದರೆ ಅದು ಜಾತ್ರೆ ಎಂಬುದನ್ನು ನಮ್ಮ ಭಾರತೀಯ ಪರಂಪರೆಯಲ್ಲಿ ಸಾರ್ವಕಾಲಿಕ ಮಾನ್ಯವಾದುದು.
ಲಕ್ಷ್ಮಿ ದೇವಿಯ ಮಹಾತ್ಮೆ ಅಗಾಧವಾಗಿದ್ದು, ಪ್ರತಿ ದಿನ ಮಾತೆಯ ಆರಾಧನೆ ಮಾಡುವುದರಿಂದ ಮನಸ್ಸಿಗೆ ಶಾಂತಿ, ಮನೆಯಲ್ಲಿ ಸಮೃದ್ಧಿ ದ್ವಿಗುಣಗೊಂಡು, ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಸನ್ನತೆ ಮೂಡುತ್ತದೆ.
ಯಾವತ್ತೂ ಭಕ್ತಿಗೆ ಪ್ರಾಧಾನ್ಯತೆ ನೀಡುವ ಗದಲೇಗಾಂವ ಬಿ. ಗ್ರಾಮದ ಜನತೆ ಅನುದಿನವೂ ಸಹಬಾಳ್ವೆ ನಡೆಸುತ್ತಾ ಗ್ರಾಮದ ಹಿರಿಮೆ ವೈಶಿಷ್ಟ ಕಾಪಾಡಿಕೊಂಡು ಬರುವಂತಹ ಮನೋಬಲ ಲಕ್ಷ್ಮೀದೇವಿ ಕರುಣಿಸಲಿ ಎಂದು ಶುಭ ಹಾರೈಸಿದರು.
ವಿಠಲ ಹೂಗಾರ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
ದಿಲೀಪಕುಮಾರ ದೇಸಾಯಿ, ವಿಠಲ ಪೂಜಾರಿ, ಮುದ್ದಾರೆಡ್ಡಿ ಖಲಂಗರೆ ಸಂಗೀತ ಸೇವೆ ಸಲ್ಲಿಸಿದರು.
ಮಹಾಲಕ್ಷ್ಮಿ ಮಂದಿರದ ಅಧ್ಯಕ್ಷರಾದ ಪಾಂಡುರಂಗ ಜಮಾದಾರ, ಉಪಾಧ್ಯಕ್ಷರಾದ ಪಂಡಿತರಾವ ಪೆÇಲೀಸ್ ಪಾಟೀಲ, ತುಕಾರಾಮ ರೆಡ್ಡಿ ಬಾಕಾರೆ, ಹುಸೇನ್ ಪಟೇಲ್, ವೆಂಕಟರೆಡ್ಡಿ ಬಂದೆ, ಶಾಲಿವಾನ ಪೆÇಲೀಸ್ ಪಾಟೀಲ, ಅಪ್ಪಣ್ಣ ಜನವಾಡ, ಕಾರ್ತಿಕ ಸ್ವಾಮಿ ಯಲದಗುಂಡಿ, ವೀರಾರೆಡ್ಡಿ ಕುಸಂಗೆ, ಸುಧಾಕರ ಜಮಾದಾರ, ಚನ್ನಪ್ಪ ಮಾಳಗೆ, ಧರ್ಮರಾವ ಹಾರಕೂಡೆ, ಮುಂತಾದವರು ಉಪಸ್ಥಿತರಿದ್ದರು.