ದೇಶದ ಆರ್ಥಿಕತೆ ಪ್ರಬಲವಾಗಬೇಕಾದರೆ ಸ್ವದೇಶಿ ಬಳಕೆ ಹೆಚ್ಚಾಗಬೇಕು: ನಾಗೇಶರೆಡ್ಡಿ
ಬೀದರ: ಸೆ.20: ಸರಸ್ವತಿ ಶಿಕ್ಷಣ ವಿಕಾಸ ಸಮಿತಿಯಲ್ಲಿ ವಿದೇಶಿ ವಸ್ತುಗಳ ಹೋಳಿ ದÀಹನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮ ಅಧ್ಯಕ್ಷ ಸ್ಥಾನ ಸಂಸ್ಥೆಯ ಕಾರ್ಯದರ್ಶಿಗಳಾದ ಹನುಮಂತರಾವ ಪಾಟೀಲ ವಹಿಸಿದರು.
ಕಾರ್ಯಕ್ರಮಕ್ಕೆ ವಕ್ತಾರರಾಗಿ ಸಂಸ್ಥೆಯ ಉಪಾಧ್ಯಕ್ಷರಾದ ನಾಗೇಶರೆಡ್ಡಿ ಅವರು ಆಗಮಿಸಿ ಮಾತನಾಡುತ್ತ ಸ್ವದೇಶಿ ಎಂದರೆ ಸ್ವಂತದ್ದು, ಸ್ವಾವಲಂಬಿಯಾದದ್ದು ಇತಂಹ ಭಾವನೆಯನ್ನು ನಾವು ಬೆಳಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಭಾರತವನ್ನು ಭಾರತೀಯ ಶಕ್ತಿಯಾಗಿರುವ ಆಧ್ಯಾತ್ಮದ ಆಧಾರದ ಮೇಲೆ ನಡೆಸಬೇಕೆಂದು ಹೇಳಿದರು. ಆಧ್ಯಾತ್ಮಿಕ ಶಕ್ತಿ ಎಂದರೆ ನಮ್ಮ ಆತ್ಮದ ಬೆಳಕಿನಲ್ಲಿ ನಮ್ಮತನದ ಆಧಾರವಾಗಿ ಭಾರತವನ್ನು ಕಟ್ಟುವುದು. ಇದರ ಆಧಾರದ ಮೇಲೆ ಸ್ವದೇಶಿ ಮಂಚ ಎಂಬುದು ಪ್ರಾರಂಭವಾಗಿ ಸ್ವದೇಶಿ ವಿಚಾರದ ಸಂಘಟನೆಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿತು.
ವಿದೇಶಿ ವಸ್ತುಗಳ ಬಹಿಷ್ಕಾರ ನಮ್ಮ ದೇಶದ ಸ್ವಾತಂತ್ರ?? ಹೋರಾಟಕ್ಕೆ ನವಚೈತನ್ಯವನ್ನು ತುಂಬಿತ್ತು. ಸ್ವಾತಂತ್ರ?? ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರು ಸ್ವದೇಶಿ ವಸ್ತುಗಳನ್ನು ಬಳಸಬೇಕು, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಸಂದೇಶವನ್ನು ನೀಡಿದರು. ಇದರಿಂದ ದೇಶದ ಜನರಲ್ಲಿ ಒಂದುರೀತಿಯ ದೇಶಭಕ್ತಿ ಜಾಗೃತಿಗೊಂಡಿತು. ಈ ಸಂದರ್ಭದಲ್ಲಿ ಮಹಾತ್ಮಗಾಂಧಿಜೀಯವರು ಚರಕದಿಂದ ನೂಲನ್ನು ತೆಗೆದು ಬಟ್ಟೆ ತಯ್ಯಾರಿಸಿ ದೇಶದ ಜನರಿಗೆ ತಲುಪುವಂತೆ ಮಾಡಿದರು. ಇದರ ಜೊತೆಗೆ 12ನೇ ಡಿಸೆಂಬರ್ 1930 ರಂದು ಒಬ್ಬ ಮಹಾನ್ ದೇಶಭಕ್ತರಾದ ಬಾಬು ಗೇನು ಸ್ವದೇಶಿ ಹೋರಾಟದಲ್ಲಿ ಹುತಾತ್ಮರಾದ ಪ್ರಥಮ ದೇಶಭಕ್ತ. ಬಾಬು ಗೇನು ಬಡತನದಲ್ಲಿ ಬೆಳದವನು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಬಾಬು ಗೇನು ತನ್ನ ತಾಯಿಯ ಆಶ್ರಯದಲ್ಲಿ ಬೆಳದು ಸ್ವಾತಂತ್ರ?? ಹೋರಾಟದಲ್ಲಿ ಪಾಲ್ಗೊಂಡನು. ಅದರಲ್ಲೂ ಬ್ರಿಟಿಷರ ವಿರುದ್ಧವಾದ ಹೋರಾಟದಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡ ಬಾಬು ಗೇನು ಸ್ವದೇಶಿ ವಸ್ತುಗಳ ಬಳಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿದನು. ಈ ಸಂದರ್ಭದಲ್ಲಿ ಬ್ರಿಟಿಷರು ವಿದೇಶಿ ವಸ್ತುಗಳನ್ನು ಭಾರತೀಯ ಮಾರುಕಟ್ಟೆಗೆ ತಂದು ಮಾರುವ ಹುನ್ನಾರ ನಡೆಸುತ್ತಿದ್ದರು. ಇದನ್ನು ತಡೆಯಲು 22 ವರ್ಷದ ಬಾಬು ಗೇನು ಉಗ್ರ ಹೋರಾಟವನ್ನು ಪ್ರಾರಂಭಿಸಿದನು. ಒಮ್ಮೆ ಬ್ರಿಟಿಷರ ವಿದೇಶಿ ವಸ್ತುಗಳ ಟ್ರಕ್‍ಗೆ ವಿರುದ್ಧವಾಗಿ ಎದೆ ತಟ್ಟಿ ನಿಂತಿರಲು ಬ್ರಿಟಿಷ ಅಧಿಕಾರಿ ಟ್ರಕ್ ಚಾಲಕನಿಗೆ ಮೇಲೆ ಹಾಯಿಸುವಂತೆ ಆದೇಶ ನೀಡಿದನು. ಆದರೆ ಅಂತಹ ಪಾಪದ ಕೆಲಸ ನಾನು ಮಾಡಲಾರೆ ಎಂದು ಟ್ರಕ್ ಚಾಲಕ ದೂರ ಸರಿದಾಗ ಅಧಿಕಾರಿ ತಾನೆ ಚಾಲಕನಾಗಿ ಬಾಬು ಗೇನುವಿನ ಮೇಲೆ ಟ್ರಕ್‍ನ್ನು ಹಾಯಿಸಿದನು. ಹೀಗೆ ಒಬ್ಬ ಮಹಾನ್ ಸ್ವದೇಶಿ ಹೋರಾಟಗಾರ, ಸ್ವದೇಶಿ ಹೋರಾಟಕ್ಕಾಗಿ ಹುತಾತ್ಮರಾದ ಮೊಟ್ಟಮೊದಲ ವ್ಯಕ್ತಿ ಬಾಬು ಗೇನು ಎಂದು ವಕ್ತಾರರಾದ ನಾಗೇಶರೆಡ್ಡಿ ಅವರು ನುಡಿದರು.
ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಲೆಕ್ಕವಿಲ್ಲದಷ್ಟು ವಿದೇಶಿ ವಸ್ತುಗಳ ಬಳಕೆ ಮಾಡುತ್ತಿದ್ದೇವೆ. ನಮಗೆ ಇನ್ನೂ ನಮ್ಮತನದ ಅರಿವು ಮೂಡಿಲ್ಲ ಎಂದು ಹೇಳಿದರಲ್ಲದೆ, ದೇಶದ ಆರ್ಥಿಕತೆ, ಆಧ್ಯಾತ್ಮಿಕತೆ ಪ್ರಬಲವಾಗಬೇಕಾದರೆ ಸ್ವದೇಶಿ ಬಳಕೆ ಹೆಚ್ಚಾಗಬೇಕು ಎಂದರು. ನಮ್ಮ ದೇಶದಲ್ಲಿಯೇ ಉತ್ಪಾದನೆಗೊಂಡಿರುವ ಅತ್ಯಂತ ಫಲಕಾರಿಯಾಗಿರುವ ವಸ್ತುಗಳು ನಮಗೆ ಇಷ್ಟವಾಗದಂತಾಗಿದೆ. ಇನ್ನೊಂದು ವಿಷಯವಾಗಿ ಹೇಳುವುದಾದರೆ ನಮ್ಮ ಆಚರಣೆಗಳು ಸ್ವದೇಶಿ ಆಚರಣೆಗಳಾಗಬೇಕು. ಹಬ್ಬ ಹರಿದಿನಗಳಾಗಿರಬಹುದು, ಹುಟ್ಟು ಹಬ್ಬ ಆಗಿರಬಹುದು ಸ್ವದೇಶಿಯ ಪದ್ಧತಿಯಿಂದ ಆಚರಿಸೋಣ ಆಗ ಶ್ರೀಮಂತವಾದ ಭಾರತೀಯ ಸಂಸ್ಕøತಿ ಅಚ್ಚಳಿಯದೆ ಉಳಿಯಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ಇಂದು ವಿದೇಶಿ ವಸ್ತುಗಳ ಹೋಳಿ ದಹನ ಮಾಡುವುದರ ಜೊತೆಗೆ ಮತ್ತೊಮ್ಮೆ ಎಂದೂ ವಿದೇಶಿ ವಸ್ತು ನಮ್ಮ ಮನೆಗಳಿಗೆ ಬರದಂತೆ ನಾವು ಜಾಗೃತರಾಗಬೇಕು ಎಂಬ ಸಂಕಲ್ಪವನ್ನು ಮಾಡಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಗಳಾದ ಬಂಡೆಪ್ಪಾ ಎಕಲಾರೆ ಹಾಗೂ ಎಲ್ಲಾ ಪ್ರಕಲ್ಪದ ಮುಖ್ಯಗುರುಗಳು ಉಪಸ್ಥಿತರಿದ್ದರು.