ಯಳಸಂಗಿ ಬಂಧನದ ಹಿಂದೆ ಷಡ್ಯಂತ್ರ: ಮಹಾಂತೇಶ ಬಳೂಂಡಗಿ
ಅಫಜಲಪುರ: ಸೆ.20:ರಾಜ್ಯದಲ್ಲಿ ದಲಿತ ಸೇನೆ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿರುವ ವಕೀಲ ಹನುಮಂತ ಯಳಸಂಗಿ ಅವರನ್ನು ಷಡ್ಯಂತ್ರ ರಚಿಸಿ ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಹನುಮಂತ ಯಳಸಂಗಿ ಅವರನ್ನು
ಬಿಡುಗಡೆಗೊಳಿಸಿ ಷಡ್ಯಂತ್ರ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸೇನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಬಳೂಂಡಗಿ ಆಗ್ರಹಿಸಿದರು.
ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ಅವರ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಕಲಬುರಗಿ ನಗರದಲ್ಲಿರುವ ಕೆಲವು ಪುಡಿ ರೌಡಿಗಳು, ಮೀಟರ್ ಬಡ್ಡಿ ಆಡುವವರು, ಸಮಾಜ ಘಾತುಕ ಕೆಲಸ ಮಾಡುವವರು ಕೂಡಿಕೊಂಡು ಷಡ್ಯಂತ್ರ ರಚಿಸಿ ನ್ಯಾಯವಾದಿಗಳಾಗಿರುವ ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ ಯಳಸಂಗಿ ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಆದರೆ ಪೆÇಲೀಸ್ ಇಲಾಖೆ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು. ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುವ ಹನುಮಂತ ಯಳಸಂಗಿ ಅವರನ್ನು ಬಿಡುಗಡೆಗೊಳಿಸಿ ಷಡ್ಯಂತ್ರ ರಚಿಸಿದವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ರವಿ ಕಾಂಬಳೆ, ಮಹಾದೇವ ಅಂಕಲಗಿ, ಸಂತೋಷ ಸಿಂಗೆ, ಲಪ್ರಭು ತಾವಟೆ, ರಾಕೇಶ
ಬಂಕದ್, ನಾಗಪ್ಪ ಮೂರಮನ್, ಕುಮಾರ ಹೊನ್ನೇಕ್, ಹಣಮಂತ ಬಂಕದ, ಜೈಭೀಮ್ ತೇಲ್ಕರ್ ಸೇರಿದಂತೆ ಅನೇಕರು ಇದ್ದರು.