ನಾಗರಹಳ್ಳಿಯಲ್ಲಿ ಪೈಗಂಬರ ಜನ್ಮದಿನೋತ್ಸವ ಆಚರಣೆ
ಯಡ್ರಾಮಿ: ಸೆ.20:ಇಸ್ಲಾಂ ಧರ್ಮದ ಸ್ಥಾಪಕ ಮತ್ತು ಕುರಾನ್‍ನ ಘೋಷಕ. ಶಾಂತಿ ಸಾಮರಸ್ಯ ಸಂದೇಶ ಸಾರಿದ ಪ್ರವಾದಿ ಮೊಹಮ್ಮದ ಪೈಗಂಬರ ಅವರ ಜನ್ಮದಿನ ಆಚರಣೆ ಮಾಡುತ್ತಿರುವುದು ನಾವು ಪುಣ್ಯ ವಂತರು “ಟಿಪ್ಪು ಕ್ರಾಂತಿ ಸೇನೆ ಜಿಲ್ಲಾ ಗೌರವ ಅಧ್ಯಕ್ಷ” ಮಹಿಬೂಬ ಮನಿಯಾರ ಹೇಳಿದರು.
ಸೋಮವಾರ ಮುಸ್ಲಿಂ ಕಮಿಟಿ ವತಿಯಿಂದ ತಾಲೂಕಿನ ಮಳ್ಳಿ-ನಾಗರಹಳ್ಳಿ ಗ್ರಾಮದಲ್ಲಿ ಪ್ರವಾದಿ ಮುಹಮ್ಮದ ಪೈಗಂಬರ ಅವರ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಾ, ಮದೀನಾ ಭಾವಚಿತ್ರ ಮೆರವಣಿಗೆ ಎಸ್ ಮಳ್ಳಿಯಲ್ಲಿ ನಡೆಯಿತ್ತು.
ಇದೇ ವೇಳೆ ಮಾತನಾಡಿದ ಡಾ. ಎಂ.ಎಂ ಮುಲ್ಲಾ ಮೊಹಮ್ಮದ ಪೈಗಂಬರು ಮುಸ್ಲಿಂ ಧರ್ಮ ಗುರುಗಳು ಆದರೂ ಎಲ್ಲಾ ಧರ್ಮಗಳನ್ನು ಗೌರವಿಸು, ಯಾವ ಧರ್ಮಕ್ಕೂ ದಕ್ಕೆಯಾಗುವಂತ ಕೆಲಸ ಮಾಡಬಾರದು ಎಂಬ ಒಳ್ಳೆ ಸಂದೇಶ ಸಾರಿರುವ ಮಾಹಾನ ವ್ಯೆಕ್ತಿಯನ್ನ ನಾವು ಇವತ್ತು ಒಂದು ದಿನವಲ್ಲ, ಪ್ರತಿ ದಿನವೂ ಅವರನ್ನು ನೆನಸ ಬೇಕು ಅವರು ಹಾಕಿಕೊಟ್ಟ ದಾರಿಯಲ್ಲಿ ನಾವುಗಳು ನಡೆಯಬೇಕು ಎಂದರು.
ಈ ಸಂದರ್ಭದಲ್ಲಿ ನೂರಲಿ ಕೊಂಡಗುಳಿ, ರಾಜಮಮ್ಮದ ಅಲ್ಲಾಪುರ, ಬುರಾನಸಾಬ ಖುರೇಶಿ, ಮೈಹಿಬೂಬ ಅಲ್ಲಾಪುರ, ರಿಯಾಜ ಆರ್ ಕೆ ಖುರೇಶಿ, ಸಿಕಿಂದರ ಕಲ್ಮನಿ, ಹುಸೇನ ಭಾಷ ಕಲ್ಮನಿ, ದವಲಸಾಬ ಹುಡೇದಮನಿ, ಫಕ್ರುದ್ದೀನ ಮುಲ್ಲಾ, ಮೈನು ಮೋಸಳಗಿ, ಮೈಬೂಬ ಗಬಸಾವಲಗಿ, ಮೈಬೂಬ ಟೇಲರ, ದಸ್ತಗಿರಸಾಬ ಖಾಜಿ, ದವಲು ಮುರಡಿ, ಮಕ್ತುಮ್ ಟೇಲರ ಇಮಾಮ ಖಾಜಿ, ಮಹಿಬೂಬ ಸಾಸಬಾಳ, ಶಮೀರ ಆಲಮೇಲ ಹಾಗೂ ಗ್ರಾಮಸ್ಥರು ಇದ್ದರು.