ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಪ್ರ-ಶಿಕ್ಷಣ ಕಾರ್ಯಾಗಾರ
ಬೀದರ : ಸೆ.20: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಮಹಾವಿದ್ಯಾಲಯದ ಬೀದರ ನಗರದಲ್ಲಿ 1960ರಲ್ಲಿ ಸ್ಥಾಪನೆಗೊಂಡು ವಿಶಾಲವಾದ ಆವರಣ ಹೊಂದಿದ್ದು ಬೀದರಿನ ಹೃದಯಭಾಗದಲ್ಲಿ ಅಸ್ತಿತ್ವದಲ್ಲಿದೆ. ನಮ್ಮ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯ ಉನ್ನತ ಹುದ್ದೆಗಳು ಹಾಗೂ ದೇಶದ ಉನ್ನತ ಹುದ್ದೆಗಳಲ್ಲಿ ಆಸೀನರಾಗಿದ್ದಾರೆ ಇದು ನಮಗೆ ಹೆಮ್ಮೆಯ ವಿಷಯ. ಹಿಂದೆ ಹಲವಾರು ವಿದ್ಯಾರ್ಥಿಗಳು ಮೊಬೈಲ್ ಗೀಳಿಲ್ಲದೆ ಗ್ರಂಥಾಲಯಕ್ಕೆ ಹೋಗಿ ಹಲವಾರು ಗ್ರಂಥಗಳು, ಪುಸ್ತಕಗಳು ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳು ಪಡೆದು ತಮ್ಮ ತಂದೆ ತಾಯಿ, ಗ್ರಾಮದ ಹಾಗೂ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮರ ಅಣದೂರೆಯವರು ಮಾತನಾಡುತ್ತಾ ನಮ್ಮ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಲು ಅತ್ಯಂತ ಕ್ರೀಯಾಶೀಲ ಉಪನ್ಯಾಸಕರನ್ನು ಹೊಂದಿದ್ದು ತಾವೇಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜ್ಞಾನದ ದಾಸರಾಗಿ ಹಾಗೂ ಗ್ರಂಥಾಲಯಕ್ಕೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಓದಿ ಹಾಗೂ ಇ=ಗ್ರಂಥಾಲಯ, ಎನ್‍ಲಿಸ್ಟ್, ಉಪಯೋಗ ಪಡೆದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಂಡು ನಿಮ್ಮ ಅತಿ ಹೆಚ್ಚು ಸಮಯ ಓದುವ ಹವ್ಯಾಸ ಬೆಳೆಸಿಕೊಂಡು ದುಶ್ಚಟಕ್ಕೆ ಬಲಿಯಾಗದೆ ಒಬ್ಬ ಒಳ್ಳೆಯ ಸತ್ಪ್ರಜೆಯಾಗಿ ಬಾಳಿ ಬದುಕಬೇಕು ನಮ್ಮ ಆದರ್ಶ ಇನ್ನೋಬ್ಬರಿಗೆ ದಾರಿ ದೀಪವಾಗಬೇಕೆಂದು ನುಡಿದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಕುರಿತು ಡಾ. ಸಾಮ್ರಾಟ, ಕಲಾ ವಿಭಾಗ ಕುರಿತು ಡಾ. ಶಿವಲೀಲಾ, ವಾಣಿಜ್ಯ ವಿಭಾಗ ಕುರಿತು ಡಾ. ಲಕ್ಷ್ಮೀ, ಬಿ.ಸಿ.ಎ. ವಿಭಾಗ ಕುರಿತು ಶ್ರೀ ವಿಕ್ರಮ್ ಎನ್.ಸಿ.ಸಿ. ವಿಭಾಗ ಕುರಿತು ಶ್ರೀ ಮಾರುತಿ, ಎನ್.ಎಸ್.ಎಸ್. ವಿಭಾಗ ಕುರಿತು ಶ್ರೀ ಬಸವರಾಜ ಬಿರಾದಾರ, ಹಾಗೂ ಕಛೇರಿ ಆಡಳಿತ ಕುರಿತು ಶ್ರೀ ಸುಜೀತಕುಮರ ಬಿ ಮಾಹಿತಿ ಕೊಟ್ಟರು.
ಈ ಕಾರ್ಯಕ್ರಮವನ್ನು ಕು. ಕುಂಕುಮ ಪ್ರಾರ್ಥನೆ ಗೀತೆ ಹಾಡಿದರೆ, ಸ್ವಾಗತವನ್ನು ಡಾ. ಸೂರ್ಯವಂಶಿ ಪೂಜಾ ನಡೆಸಿಕೊಟ್ಟರೆ, ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆ ನಿರೂಪಿಸಿದರೆ, ಶ್ರೀ ಸಂದೀಪ ವನ್ನಾಳೆ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.