ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿ: ಪ್ರಕಾಶ ಖಂಡ್ರೆ
ಭಾಲ್ಕಿ:ಸೆ.20: ಶ್ರೀ ಗುರುಬಸವ ಜನ ಸೇವಾ ಮಹಿಳಾ ಸಂಸ್ಥೆಯಿಂದ ನಡೆಯುತ್ತಿರುವ ಶ್ರೀ ಗುರು ಪ್ರಸನ್ನ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡುತಿದ್ದು, ಮುಂದೇಯು ಕುಡ ಸಂಸ್ಥೆಯ ಶಿಕ್ಷಕ, ಶಿಕ್ಷಕಿಯರು ಈ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೋಡುವ ಮುಖಾಂತರ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ಶ್ರಮಿಸಿ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಕರೆ ನೀಡಿದರು.
ನಿನ್ನೆ ಪಟ್ಟಣದ ಶ್ರೀ ಗುರು ಪ್ರಸನ್ನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ಜ್ಞಾನದ ಬೆಳಕು ಅಭಿನಂದನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಗುರು ಪ್ರಸನ್ನ ಪದವಿ ಮಹಾವಿದ್ಯಾಲಯದಲ್ಲಿ ಕಲಿತು ಹೋದಂತಹ ವಿದ್ಯಾರ್ಥಿಗಳು ಹಾಗೂ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಸ್ವಂತ ಖರ್ಚಿನಿಂದ ಶಿಕ್ಷಣ ರತ್ನ ಪ್ರಶಸ್ತಿ ಕಾರ್ಯಕ್ರಮ ಆಯೋಜನೆ ಮಾಡಿರುವ ಕಾರ್ಯ ಶ್ಲಾಘನೀಯ, ಎಂದರು.
ಬೀದರ್‍ನ ವಿಶ್ವವಿದ್ಯಾಲಯದ (ಮೌಲ್ಯಮಾಪನದ) ಕುಲಸಚಿವ ಪೆÇ್ರೀ, ಪರಮೇಶ್ವರ ಟಿ, ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರು ಸಾಕ್ಷತ್ ಪರಬ್ರಹ್ಮ ಎಂಬಂತೆ ಗುರುವಿಗಿಂತ ಮೇಲೆ ಯಾರು ಇಲ್ಲ, ನಾವು ನಿವೇಲ್ಲರು ಗುರು, ಹಿರಿಯರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮಾಡಿ, ಅದು ನಿಮಗೆ ಯಾವತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಉದಯಕುಮಾರ ಜಿ ಪಾಟೀಲ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ನಾಗಭೋಷಣ ಕಮಠಾಣೆ,
ಡಾ. ನಾಗಮಣಿ ಖಂಡ್ರೆ ಮಾತನಾಡಿದರು, ಪ್ರಾಚಾರ್ಯ ವಿಷ್ಣುವರ್ಧನ ಸಿ. ಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು,
ಈ ಸಂದರ್ಭದಲ್ಲಿ ಶ್ರೀ ಗುರುಬಸವ ಜನ ಸೇವಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಉಮಾದೇವಿ ಪ್ರಕಾಶ ಖಂಡ್ರೆ, ಶ್ರೀ ಗುರು ಪ್ರಸನ್ನ ಜನಸೇವಾ ಮಹಿಳಾ ಸಂಸ್ಥೆ ಕಾರ್ಯಾಧ್ಯಕ್ಷ ಗುರುಪ್ರಸಾದ ಖಂಡ್ರೆ, ಪತ್ರಕರ್ತ ರಾಜೇಶ ಮುಗಟೆ, ಮಲ್ಲಿಕಾರ್ಜುನ ಮರಕಲೆ, ಶಾಲೆಯ ಸಿಬ್ಬಂದಿ ಬಸಪ್ಪಾ ಮುಗದುಮ, ಉಮಕಾಂತ ಧಾಕಲಿ, ಆಡಳಿತಾಧಿಕಾರಿ ಬಾಲರಾಜ ಶಿವಣಗೆ, ಮಹೇಶ ತೆಂಗಪೂರೆ, ಮುಕೇಶ ಕೊಟೆ, ರಾಜು ಮೇತ್ರೆ, ರಾಜಕುಮಾರ ಕಾರಬಾರಿ, ಗುರು ಮುಲಗೆ, ಬಸವಜ್ಯೋತಿ, ಲತಾ ಬಿರಾದಾರ, ಸುಧಾರಾಣಿ ಬಿರಾದಾರ, ಅಶ್ವರ್ಯ ಸಿಂಧೆ ಇದ್ದರು. ರೇವಣಸಿದಯ್ಯಾ ಸ್ವಾಮಿ ಸ್ವಾಗತಿಸಿ, ಬಂಡೆಪ್ಪ ಕರಸಣೆ ವಂದಿಸಿದರು.