ಸುವಿಚಾರಗಳಿಂದ ಮನಸ್ಸು ಅರಳಿಸಿದ ಹೂಗಾರ ಮಾದಣ್ಣ
ಭಾಲ್ಕಿ:ಸೆ.20:ಹೂಗಾರ ಮಾದಣ್ಣನವರು ಬಸವಣ್ಣನವರ ಸಮಕಾಲೀನ ಶರಣರು. ಅನುಭವ ಮಂಟಪದಲ್ಲಿ ಎಲ್ಲ ಶರಣರ ಜತೆಗೆ ಅನುಭಾವ ಮಾಡಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ 480ನೆಯ ಮಾಸಿಕ ಶಿವಾನುಭವ ಗೋಷ್ಠಿ ಮತ್ತು ಶರಣ ಹೂಗಾರ ಮಾದಣ್ಣನವರ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರತಿ ನಿತ್ಯ ಬೆಳಿಗ್ಗೆ ಹೂಗಾರ ಮಾದಣ್ಣನವರು ಶಿವಶರಣರ ಮನೆಗೆ ಹೂ ಮತ್ತು ಬಿಲ್ವಪತ್ರಿ ವಿತರಿಸುವ ಕಾಯಕ ಮಾಡುತ್ತ ತಮ್ಮ ಸುವಿಚಾರದಿಂದ ಎಲ್ಲರ ಮನಸ್ಸುಗಳನ್ನು ಅರಳಿಸಿದರು.
ಅವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ಅತ್ಯಂತ ಶ್ರದ್ಧೆ ಇಟ್ಟುಕೊಂಡವರು. ಹೂಗಾರ ಮಾದಣ್ಣನವರ ಪತ್ನಿ ಮಹಾದೇವಿ ಪತಿಗೆ ತಕ್ಕ ಸತಿಯಾಗಿದ್ದಳು.
ಸಕಲೇಶ ಮಾದರಸರಿಂದ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ಲಿಂಗಾನುಭವವನ್ನು ಸಾಧಿಸಿದ ಮಹಾ ಶರಣರು ಇವರು. ಹೂಗಾರ ಮಾದಣ್ಣನವರ ಜೀವನ ಚರಿತ್ರೆ ಜನಪದ ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಿದೆ.
ಅವರ ವಚನಗಳು ನಮಗೆ ದೊರೆತಿಲ್ಲ. ಚರಿತ್ರೆಯೂ ಸಿಗುವುದಿಲ್ಲ. ಆದರೆ ಜನಪದ ಸಾಹಿತ್ಯದಿಂದ ಹೂಗಾರ ಮಾದಣ್ಣನವರ ಘನವ್ಯಕ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಿದೆ. ಅವರು ವಿಶ್ವಗುರು ಬಸವಣ್ಣನವರನ್ನು ನಂಬಿ ಅವರ ತತ್ವಾದರ್ಶಗಳನ್ನು ಅನುμÁ್ಠನದಲ್ಲಿ ತಂದರು ಎಂದು ತಿಳಿಸಿದರು.
ರಾಜಕುಮಾರ ಹೂಗಾರ ಶ್ರೀಮಂಡಲ ಅನುಭಾವ ನೀಡಿದರು. ಸಂತೋಷ ಮಾಲಗಾರ ಗ್ರಂಥ ಪಠಣ ಮಾಡಿದರು.
ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಮನೋಹರ ಫುಲಾರಿ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಜಯಪ್ರಕಾಶ ಮಾಲಗಾರ, ವಿಠಲ ಹೂಗಾರ, ವೀರಣ್ಣ ಹೂಗಾರ, ಬಸವರಾಜ ಹೂಗಾರ, ಶಿವಕುಮಾರ ಹೂಗಾರ, ಜಗದೀಶ ಡೋಣಗಾಪೂರೆ ಇದ್ದರು.
ಸನ್ಮಾನ :
ಇದೇ ವೇಳೆ ರವಿ ಹೂಗಾರ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ರಾಜಕುಮಾರ ಹೂಗಾರ ಅವರು ವಚನ ಸಂಗೀತ ನಡೆಸಿ ಕೊಟ್ಟರು. ವೀರಣ್ಣ ಕುಂಬಾರ ನಿರೂಪಿಸಿದರು.
ಶರಣ ಹೂಗಾರ ಮಾದಣ್ಣನವರ ಸತ್ಯಶುದ್ಧ ಕಾಯಕದ ಮೂಲಕ ಶ್ರೇಷ್ಠ ಶರಣರಾಗಿ ಗುರುತಿಸಿ ಕೊಂಡಿದ್ದರು. ಆದರ್ಶ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು.