೫೦ ಅಡಿ ಬದಲು ೪೦ ಅಡಿ ಅಗಲೀಕರಣವಷ್ಟೇ
ಆಳಂದ ಮುಖ್ಯರಸ್ತೆ ಅಗಲೀಕರಣ ಜಂಟಿ ಸರ್ವೆ ಶುರು
ಆಳಂದ: ಅ.೫:ನೆನಗುದ್ದಿಗೆ ಬಿದ್ದಿರುವ ಬಹುನಿರೀಕ್ಷಿತ ಪಟ್ಟಣದ ಮುಖ್ಯರಸ್ತೆಯ ಅಗಲೀಕರಣ ಕಾರ್ಯಕೈಗೊಳ್ಳಲು ಆಡಳಿತ ವಲಯ ಒಂದುವರೆ ವರ್ಷದ ಬಳಿಕ ಮತ್ತೆ ಸಿದ್ಧತೆ ಆರಂಭಿಸಿದೆ.
ರಸ್ತೆ ಅಗಲೀಕರಣಕ್ಕೆ ಪೂರ್ವಸಿದ್ಧತಾ ಪ್ರಕ್ರಿಯೆ ಗುರುವಾರದಿಂದ ಆರಂಭಿಸಿದ ಪುರಸಭೆ ಆಡಳಿತವು. ಪುರಸಭೆ ಹಾಗೂ ಭೂಮಾಪನ ಇಲಾಖೆಯ ಸಿಬ್ಬಂದಿಗಳ ಜಂಟಿ ಸರ್ವೆ ಕಾರ್ಯವನ್ನು ಆರಂಭಿಸಿದೆ. ಈ ಹಿಂದೆ ೫೦ ಅಡಿ ಅಗಲದ ರಸ್ತೆಗೆ ಯೋಜನೆ ರೂಪಿಸಿತ್ತಾದರು. ಈ ಬಾರಿ ೪೦ ಅಡಿ ಮಾತ್ರ ( ಮಧ್ಯಭಾಗದಿಂದ ಎಡ, ಬಲ ತಲಾ ೨೦ಅಡಿ) ಅಗಲದ ರಸ್ತೆ ವಿಸ್ತರಣೆಗೆ ಯೋಜನೆ ಮುಂದಿಟ್ಟು ಸರ್ವೆ ಆರಂಭಿಸಿದೆ.
ತಲಾ ಎರಡೂ ಬದಿಯ ೫ ಅಡಿ ಅಗಲೀಕರಣ ಕೈಬಿಡುತ್ತಿರುವ ಕುರಿತು ರಸ್ತೆ ಬದಿಯ ಆಸ್ತಿಮಾಲೀಕರಿಗೆ ಕೊಂಚ ತೃಪ್ತಿಕರವಾಗಿ ಅಗಲೀಕರಣಕ್ಕೆ ಸಹಮತ ಕೇಳಿಬರುತ್ತಿದೆ. ಅಲ್ಲದೆ ಸರ್ವೆ ಸಂದರ್ಭದಲ್ಲಿ ರಸ್ತೆ ಬದಿಯ ಆಸ್ತಿ ಮಾಲೀಕ ಸಿದ್ಧಲಿಂಗ ಎಂಬುವರು ಎಷ್ಟು ಅಗಲೀಕರಣಕ್ಕೆ ನಿರ್ಧರಿಸಲಾಗಿದೆ. ಈಗಲೇ ತಿಳಿಸಿ ಮಾಡುದಾದರೆ ಮೊದಲು ರಸ್ತೆ ಅಗಲೀಕರಣ ಮಾಡಬೇಕು ಎಂದು ಅಧಿಕಾರಿಗಳ ಮುಂದೆ ಹೇಳಿದರು.
ಜಂಟಿ ಸರ್ವೆಯಲ್ಲಿ ಭೂಮಾಪನ ಇಲಾಖೆಯ ಸಿಬ್ಬಂದಿ ದತ್ತಾ, ಪುರಸಭೆ ಕಂದಾಯ ನಿರೀಕ್ಷಕ ಶಫಿರೋತೆ, ಎಇ ಜಗದೀಶ ಹಿರೇಮಠ, ಬಿಲ್ ಕಲೆಕ್ಟರ್ ಶಿವರಾಯ ಸರಸಂಬಿ, ಶಹಾಜೀರಾವ್, ಸಿಬ್ಬಂದಿ ಅಜೀಂ, ಚಿದಾನಂದ ಒಳಗೊಂಡ ತಂಡವು ಎರಡು ದಿನಗಳಿಂದ ಸರ್ವೆ ಕಾರ್ಯ ಚುರುಕಿನಿಂದ ಕೈಗೆತ್ತಿಕೊಂಡಿದೆ.
ಈ ಹಿಂದೆ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದಾಗ ತಾಂತ್ರಿಕ ಅಡೆ, ತಡೆಯಿಂದಾಗಿ ಹಾಗೂ ರಸ್ತೆ ಬದಿಯ ೯ ಮಂದಿ ಆಸ್ತಿಯ ಮಾಲೀಕರು ಪರಿಹಾರಕ್ಕಾಗಿ ಕೋರ್ಟ್ ಮೋರೆಹೋದ ಹಿನ್ನೆಲೆಯಲ್ಲಿ ಕಲಬುರಗಿ ಹೈಕೋರ್ಟ್ ನೀಡಿದ ತಡೆಯಾತಜ್ಞೆಯಿಂದಾಗಿ ಪ್ರಕ್ರಿಯೆ ಸ್ಥಗೀತಗೊಂಡಿದಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅಗಸ್ಟ್ ೨೧ರಂದು ರಸ್ತೆಗೆ ಸಂಬAಧಿಸಿದAತೆ ಅಗಲೀಕರಣದ ರಸ್ತೆಯ ಮೊದಲು ಸರ್ವೆ ಕೈಗೊಂಡು ರಸ್ತೆ ಬದಿಯ ಆಸ್ತಿಯ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತವು ಪ್ರಕ್ರಿಯೆ ಆರಂಭಿಸುವAತೆ ಸ್ಥಳೀಯ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಕಲಬುರಗಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು ಒಳಗೊಂಡ ಸ್ಥಳೀಯ ಅಧಿಕಾರಿಗಳ ಸಭೆ ನಡೆದು ಕೋರ್ಟ್ ನಿರ್ದೇಶನದಂತೆ ಮುಂದಿನ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ ರಸ್ತೆ ಅಗಲೀಕರಣ ಸಮಿತಿ ರಚಿಸಿ ಸಹಾಯಕ ಆಯುಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಸ್ತೆ ಜಂಟಿ ಸರ್ವೆ:
ಪಟ್ಟಣದ ಮುಖ್ಯರಸ್ತೆಯಲ್ಲಿ ಗುರುವಾರದಿಂದ ಸರ್ವೆ ಕೈಗೆತ್ತಿಕೊಂಡ ಪುರಸಭೆಯೂ ಶೀಘ್ರವೇ ರಸ್ತೆಯ ಬದಿಯ ಸಂಬAಧಿತ ಮಾಲೀಕರನ್ನು ತಮ್ಮ ಮಾಲೀಕತ್ವದ ದಾಖಲಾತಿಗಳನ್ನು ಒದಗಿಸುವಂತೆ ಐದಾರು ದಿನಗಳಲ್ಲಿ ನೋಟಿಸ್ ನೀಡಲಾಗುವುದು ಎಂದು ಮುಖ್ಯಾಧಿಕಾರಿ ಸಂಗಮೇಶ ಪನ್ನಶೆಟ್ಟಿ ಅವರು ಪ್ರತಿಕ್ರಿಯೆಸಿದ್ದಾರೆ.
೫೦ ಅಡಿ ಬದಲು ೪೦ ಅಡಿ ಅಗಲ: ಅಗಲೀಕರಣಕ್ಕೆ ಸಂಬAಧಿಸಿದ ಹಳೆಯ ತಹಸೀಲ್‌ನಿಂದ ದರ್ಗಾರೋಡ್‌ವರೆಗಿನ ರಸ್ತೆಯ ಅಗಲದ ಕುರಿತು ಅಧಿಕಾರಿಗಳ ನಕ್ಷೆಯ ಹುಡುಕಾಡತೊಡಗಿದ್ದಾರೆ. ರಸ್ತೆಯ ೧೫, ೧೦, ೨೦ ಅಡಿ ಹೀಗೆ ಅಲ್ಲಲ್ಲಿನ ಅಗಲದ ರಸ್ತೆ ಇದ್ದು, ಈಗ ಪುರಸಭೆ ಮತ್ತು ಸರ್ವೆ ಇಲಾಖೆ ಜಂಟಿ ಸರ್ವೆ ಕೈಗೊಂಡು ರಸ್ತೆ ಮಧ್ಯಭಾಗದಿಂದ ಎರಡೂ ಬದಿಗೆ ತಲಾ ೨೦ ಅಡಿಯಲ್ಲಿ ಬರುವ ನಿವೇಶನ ಮತ್ತು ಕಟ್ಟಡಗಳಿಗೆ ಮಾರ್ಕ್ ಹಾಕಲಾಗುತ್ತಿದೆ.
೧೧ ಕೋಟಿ ಅನುದಾನ: ಈ ರಸ್ತೆ ಅಗಲೀಕರಣ, ನಿರ್ಮಾಣ, ಚರಂಡಿ ಹಾಗೂ ಬೀದಿ ದೀಪ ಕಾಮಗಾರಿಗೆ ಕಳೆದೆರಡು ವರ್ಷಗಳಿಂದ ೧೧ ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ೧೧ ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ, ನಿರ್ಮಾಣ ಮತ್ತು ಚರಂಡಿ ಬೀದಿ ದೀಪಗಳ ಕಲ್ಪಿಸಬೇಕಿದೆ.
ಸಾರ್ವಜನಿಕ ಹಿತಾಸಕ್ತಿ:
ರಸ್ತೆ ಅಗಲೀಕರಣದ ಒಳಪಡುವ ಆಸ್ತಿ ಮಾಲೀಕರು ಇಚ್ಛಿಸಿದ್ದಲ್ಲಿ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿಸಲುವಾಗಿ ಒಪ್ಪಿಗೆ ಪತ್ರವೂ ನೀಡಬಹುದಾಗಿದೆ ಎಂದು ಮುಖ್ಯಾಧಿಕಾರಿ ಸಂಗಮ್ಮೇಶ ಪನ್ನಶೆಟ್ಟಿ ಅವರು ಸಂಬAಧಿತರಿಗೆ ಮನವಿ ಮಾಡಿದ್ದಾರೆ.