ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಡಾ. ವಿವೇಕಾನಂದ ದೇವರು
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೫ : ನಮ್ಮ ದೇಶದಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ. ಮಕ್ಕಳು ಗುರುಗಳ ಮಾರ್ಗದರ್ಶನದಲ್ಲಿ ಚಾಚೂ ತಪ್ಪದೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪೂಜ್ಯಶ್ರೀ ಡಾ. ವಿವೇಕಾನಂದ ದೇವರು (ಗುಣದಾಳ) ಹೇಳಿದರು.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಾಪೂಜಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬಬಲೇಶ್ವರ ತಾಲೂಕಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕರÀ ದಿನೋತ್ಸವ ೨೦೨೪ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ದೇಶದ ಸಂಪತ್ತು, ಬೆನ್ನೆಲುಬು. ಆದ್ದರಿಂದ ಸರ್ಕಾರಗಳ ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸಿ ಉತ್ತಮ ಸಮಾಜ ನಿರ್ಮಿಸಲು ಸರಕಾರದ ಗಮನ ಸೆಳೆದು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು. ಶಿಕ್ಷಕರು ಸಹ ಪಾಠಭೋಧನೆಯನ್ನು ಸರಿಯಾಗಿ ಮಾಡಲು ತಿಳಿಸಿದರು.
ವ್ಹಿ.ಎಸ್ ಬಿರಾದಾರ ಜ್ಯೋತಿ ಬೆಳಗಿಸಿ ಮಾತನಾಡಿ, ಶಿಕ್ಷಕರು ಶಿಕ್ಷಣದ ಜೊತೆ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಲು ಸೂಚಿಸಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಅಧ್ಯಕ್ಷÀ ಸಂಗಮೇಶ ಬಬಲೇಶ್ವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆಯನ್ನು ಮಾಡಲು ನಾವು,ನೀವು ಕೂಡಿ ಏನು ಮಾಡಬೇಕೆಂದು ವಿವರಿಸಿದರು. ಒಂದು ದೇಶ ಪ್ರಗತಿಶೀಲ ದೇಶವಾಗಬೇಕಾದರೆ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ರವಿಕುಮಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ರಾಜ್ಯದಲ್ಲಿ ನಮ್ಮ ಅನುದಾನಿತ ಸಂಘ ಒಂದು ಬಲಿಷ್ಠ ಸಂಘವಾಗಿದೆ. ಶಿಕ್ಷಕರ ಸಮಸ್ಯೆಗಳ ಕುರಿತು ರಾಜ್ಯ ಮಟ್ಟದಲ್ಲಿ ಹೋರಾಡಿ ವಿವಿಧ ಬೇಡಿಕೆಗಳನ್ನು ಈಡೇರಿಸಿದೆ. ಇನ್ನು ಮುಖ್ಯವಾದ ಬೇಡಿಕೆಗಳಾದ ಓಪಿಎಸ್, ಕಾಲ್ಪನಿಕ ಜ್ಯೋತಿಸಂಜೀವಿನಿ, ಶಿಕ್ಷಕರ ನೇಮಕಾತಿ ಇನ್ನುಳಿದವುಗಳನ್ನು ಬೇಡಿಕೆಗೆ ಪ್ರಯತ್ನಿಸಲಾಗುವುದು ಎಂದರು.
ಸAಸ್ಥೆಯ ಅಧ್ಯಕ್ಷ ಶಿವಾನಂದ ಹಿರೇಕುರುಬರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ನಮ್ಮ ಶಿಕ್ಷಕರ ಸಮಸ್ಯೆಗಳು ಬಹಳಷ್ಟು ಈಡೇರಿದಂತಾಗಿವೆ. ಇಲ್ಲಿ ಎಲ್ಲರೂ ಕೆ.೨ ಮೂಲಕ ಪ್ರತಿ ತಿಂಗಳ ಸರಳವಾಗಿ ಸಂಬಳ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳೊಂದಿಗೆ ಉತ್ತಮ ಸಂಬAಧಗಳನ್ನು ಇಟ್ಟುಕೊಂಡು ಮಕ್ಕಳಿಗೆ ಉತ್ತಮ ಗುಣಮಟ್ಟದ ಬೋಧನೆಯನ್ನು ಮಾಡಲು ತಿಳಿಸಿ ಜಿಲ್ಲೆಯಲ್ಲಿ ಮಹಿಳಾ ಶಿಕ್ಷಕಿಯರು ಸಂಘಕ್ಕೆ ಸೇರಿದ ಮೇಲೆ ಹೊಸ ಕಳೆ ಬಂದಿದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿÀ ಗಿರೀಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶ್ರೀಶೈಲಗೌಡ ಬಿರಾದಾರ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಅನುಭವಿಸುವ ಸಮಸ್ಯೆಗಳ ಕುರಿತ ಮಾತನಾಡಿದರು. ವಿ.ಎಸ್. ಕಳಸಗೊಂಡ ಅನಿಸಿಕೆ ಹಂಚಿಕೊAಡರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಜಿ. ಹನಮಂತಪ್ಪ, ಉಪ ನಿರ್ದೇಶಕÀ ಎನ್.ಎಚ್. ನಾಗೂರ, ರಾಜ್ಯ ಉಪಾಧ್ಯಕ್ಷÀ ರಂಜೀತ ಬಾಬರ, ರಾಜ್ಯ ಸಂಘಟನಾ ಕಾರ್ಯದಾರ್ಶಿ ವಿಜಯಕುಮಾರ ಪಟ್ಟಾರಿ, ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಶೋಕಗೌಡ ಮೇಲಾಶಂಕರ, ಸಂಗಪ್ಪ ತಮಗೊಂಡ, ಶ್ರೀಶೈಲಗೌಡ ಪಾಟೀಲ, ವಿ.ಎಸ್. ಪಾಟೀಲ, ರೋಹಿಣಿ ಚವ್ಹಾಣ, ಎಲ್ಲ ಪದಾಧಿಕಾರಿಗಳು, ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ಗುರು ಹಿರಿಯರು ಉಪಸ್ಥಿತರಿದ್ದರು.