ಸನ್ನತಿ ಪ್ರಾಧಿಕಾರಕ್ಕೆ ೫೦೦ ಕೋಟಿ ಹಣ ಬಿಡುಗಡೆಗೆ ಒತ್ತಾಯ
ಆಳಂದ: ಅ.೫:ಸನ್ನತಿ ಪ್ರಾಧಿಕಾರಕ್ಕೆ ೫೦೦ ಕೋಟಿ ಹಣ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ತಾಲೂಕು ಬೌದ್ಧಮಹಾಸಭಾ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪಟ್ಟಣದ ಹೊರವಲಯದ ತಾಲೂಕು ಆಡಳಿತಸೌಧನಲ್ಲಿ ಶುಕ್ರವಾರ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿ ಸಲ್ಲಿಸಿದ ಮುಖಂಡರು ಬೇಡಿಕೆ ಈಡೇರಿಸುವಂತೆ ಅವರು ಆಗ್ರಹಿಸಿದರು.
ಕರ್ನಾಟಕದಲ್ಲಿ ಕಲೆ ಸಾಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಉಳಿಸಿ ಬೆಳೆಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಅನೇಕ ಪ್ರಾಧಿಕಾರಗಳಿಗೆ ಮೂಲಭೂತ ಸೌಕರ್ಯ ಮತ್ತು ಸದರಿ ಪ್ರಾಧಿಕಾರಗಳ ವ್ಯಾಪ್ತಿ ಪ್ರದೇಶವನ್ನು ಅಭಿವೃದ್ಧಿಪಡಿಸಿ ರಾಜ್ಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರವಾಸಿ ತಾಣಗಳಾಗಿ ಪರಿವರ್ತನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ತಮ್ಮ ಘನ ಸರ್ಕಾರದ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಆದರೆ ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕನಗನಹಳ್ಳಿ, ಸನ್ನತಿ, ಯಾದಗಿರಿ ಜಿಲ್ಲೆಯ ಶಹಪುರ್, ಹೀಗೆ ಅನೇಕ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಸಿ ವಿಶ್ವ ವಿಖ್ಯಾತ ಬೌದ್ಧ ಧರ್ಮದ ಬಗ್ಗೆ ಅನೇಕ ಶಿಲಾ ಶಾಸನಗಳು ಮತ್ತು ಪ್ರಿಯದರ್ಶಿ ಸಾಮ್ರಾಜ್ಯ ಅಶೋಕರ ಕಾಲವನ್ನು ನೆನಪಿಸುವ ಶಾಸನಗಳು ಅಲ್ಲಿ ಸ್ವತಃ ಸಾಮ್ರಾಟ್ ಅಶೋಕ ರಾಜ ಮತ್ತು ಅವರ ಮಗ ಮಹೇಂದ್ರ ಕೊಟ್ಟ ಅನೇಕ ಶಿಲಾ ಲೇಖನಗಳು ಪಾಲಿ ಭಾಷೆಗಳಲ್ಲಿ ದೊರಕಿರುವುದು ರಾಜ್ಯ ರಾಷ್ಟçಕ್ಕೆ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿ ಮತ್ತು ನಮಗೆಲ್ಲರಿಗೂ ಸಂತೋಷದ ಸಂಗತಿಯಾಗಿದೆ.
ಆದರೆ ರಾಜ್ಯ ಸರ್ಕಾರವು ಬೌದ್ಧ ಪಾರಂಪರೆ ಕಲೆ ಸಾಹಿತ್ಯ ರೂಪಿಸಿ ಅಭಿವೃದ್ಧಿಪಡಿಸಲು ಸನ್ನತಿ ಪ್ರಾಧಿಕಾರ ರಚಿಸಲಾಗಿದ್ದು ಇದರ ಜೊತೆಯಲ್ಲಿ ಕೂಡಲಸಂಗಮ ಮತ್ತು ಬಸವಕಲ್ಯಾಣ ಪ್ರಾಧಿಕಾರಗಳು ಅಸ್ತಿತ್ವಕ್ಕೆ ಬಂದಿರುವುದು ಗಮನಾರವಾಗಿದೆ ಆದರೆ ಬಸವಕಲ್ಯಾಣ ಮತ್ತು ಕೂಡಲಸಂಗಮ ಪ್ರಾಧಿಕಾರಗಳಿಗೆ ನೀಡಲಾದ ಅಭಿವೃದ್ಧಿ ಅನುದಾನ ಸನ್ನತಿ ಪ್ರಾಧಿಕಾರಕ್ಕೂ ನೀಡಬೇಕು. ಎಂದು ಒತ್ತಾಯಿಸಿದರು.
ಸನ್ನತಿಗೆ ಪ್ರಾಧಿಕಾರಕ್ಕೆ ಅನುದಾನ ನೀಡದೇ ಇರುವುದು ರಾಜ್ಯ ಬೌದ್ಧ ಉಪಸಕ,ಉಪಾಸಕೀಯರಿಗೆ ನೋವುಂಟು ಮಾಡಿದೆ. ಈಚೆಗೆ ತಮ್ಮ ಕಲಬುರ್ಗಿ ಭೇಟಿ ಸಂದರ್ಭದಲ್ಲಿ ಅನುದಾನ ನೀಡಲು ಸಂಘಟನೆಗಳು ತಮ್ಮನ್ನು ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗ ಮೂಲಕ ಇತ್ತಾಯಿಸಿದರು ಸಹ ಸೆ. ೧೭ರಂದು ನಡೆದ ಸಚಿವ ಸಂಪುಟದಲ್ಲಿ ಸನ್ನತಿ ಪ್ರಾಧಿಕಾರಕ್ಕೆ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಈ ಕೂಡಲೇ ಸನ್ನತಿ ಪ್ರಾಧಿಕಾರಕ್ಕೆ ಅನುದಾನ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ಭಾರತೀಯ ಬೌದ್ಧ ಮಹಾಸಭಾ ಹಿರಿಯ ಮುಖಂಡ ದಯಾನಂದ ಶೇರಿಕಾರ, ಬಸವಲಿಂಗಪ್ಪ ಗಾಯಕವಾಡ, ಬಾಬುರಾವ್ ಅರುಣದೋಯ, ಚಂದ್ರಶಾ ಗಾಯಕವಾಡ, ಮಲ್ಲಿಕಾರ್ಜುನ ಬೋಳಣಿ, ದತ್ತಾತ್ರೆಯ ಕಟ್ಟಿಮನಿ, ಆನಂದರಾಯ ಗಾಯಕವಾಡ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.