ಗಮನ ಸೆಳೆದ ಬಾಲ್ಯವಿವಾಹ ತಡೆ ಮಹಿಳೆಯರ ಜಾಗೃತಿ ರೂಪಕ
ಆಳಂದ: ಅ.೫:ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿ ಮಹಾದೇವಿ ವಚ್ಛೆ ನೇತೃತ್ವದಲ್ಲಿ ಕೈಗೊಂಡ ಜಾಗೃತಿ ರೂಪಕ ಜನಮನ ಸೆಳೆಯಿತು.
ಈ ರೂಪಕದಲ್ಲಿ ಬಾಲ್ಯ, ಸಮಾಜ, ಮತ್ತು ಕುಟುಂಬದ ದುಷ್ಪರಿಣಾಮಗಳನ್ನು ತಡೆಯಲು ವಿಭಿನ್ನ ಪಾತ್ರಗಳು ಗಮನ ಸೆಳೆದವು.
ಸಿಡಿಪಿಒ ಶ್ರೀಕಾಂತ ಮೇಂಗಜಿ ಮಾರ್ಗದರ್ಶನದಲ್ಲಿ ಹಿರಿಯ ಮೇಲ್ವಿಚಾರಕಿ ಮಹಾದೇವಿ ವಚ್ಛೆ ಸಾರಥ್ಯದ ಬಾಲ್ಯವಿವಾಹ ಜಾಗೃತಿ ರೂಪಕದಲ್ಲಿ ಬಾಲ್ಯವಿವಾಹ ತಡೆಯಿಂದ ಪೋಸ್ಕೋ ಕಾಯ್ದೆ ವರೆಗಿನ ಜಾಗೃತಿ ಅರಿವು ಮೂಡಿಸುವಲ್ಲಿ ಕೈಗೊಂAಡಿದ್ದ ಮಹಿಳೆಯರ ಪ್ರತಿಯೊಂದು ಪಾತ್ರಗಳು ನುರಿತ ಕಲಾವಿದರನ್ನೂ ಮಿರಿಸುವಂತ್ತಿದ್ದವು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ರಾಜಕುಮಾರ ರಾಠೋಡ, ತಾಪಂ ಇಒ ಮಾನಪ್ಪಕಟ್ಟಿಮನಿ ಸೇರಿದಂತೆ ಅಧಿಕಾರಿಗಳ ಮತ್ತು ನಾಗರಿಕರ ಸಮ್ಮುಖದಲ್ಲಿ ರೂಪಕ ಪ್ರದರ್ಶನ ನಡೆಯಿತು.
ಈ ರೂಪಕದಲ್ಲಿ ಪೊಲೀ¸ ಪಾತ್ರವನ್ನು ಫಾತಿಮಾ, ಬಾಲಕಿ ಪಾತ್ರ ಲಕ್ಷಿö್ಮÃ ವಹಿಸಿದ್ದು, ಇವಳ ತಂದೆ, ತಾಯಿ ಪಾತ್ರದಲ್ಲಿ ಬಂಡೆಮ್ಮ, ಕವಿತಾ ಮತ್ತು ಬಾಲಕನ ಪಾತ್ರ ಬೌರಮ್ಮ ಇವರ ತಂದೆ ಪಾತ್ರದಲ್ಲಿ ಕಮವಲಾ, ತಾಯಿಯಾಗಿ ಈರಮ್ಮಾ ಅವರ ಪ್ರದರ್ಶಿಸಿದ್ದರು. ಪಂಚರ ಪಾತ್ರದಲ್ಲಿ ಊರಿನ ಗೌಡರಾಗಿದ್ದ ಪುಷ್ಪಾವತಿ ಚಟ್ಟಿ ನಿರ್ವಹಿಸಿದ್ದು. ಅಂಗನವಾಡಿ ಕಾರ್ಯಕರ್ತೆಯಾಗಿ ಸುವರ್ಣ ಕುಂಬಾರ ಮೇಲ್ವಿಚಾರಕಿ ನಿರ್ವಹಿಸಿದ್ದರು. ಮೇಲ್ವಿಚಾರಕಿಯರ ಪಾತ್ರವನ್ನು ಅಧಿಕಾರಿ ಮಹಾದೇವಿ ವಚ್ಛ ನಿವಹಿಸಿ ಗಮನ ಸೆಳೆದರು.
ಅಂಗನವಾಡಿ ಸಿಬ್ಬಂದಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಮುಂಚೂಣಿಯಲ್ಲಿ Àಮುದಾಯದ ಮಧ್ಯೆ ಬಾಲ್ಯ ವಿವಾಹದ ಹಾನಿಕಾರಕ ಪರಿಣಾಮಗಳನ್ನು ವಿವರಿಸಿದರು. ಅಲ್ಲದೆ, ಮಕ್ಕಳ ಪಾಲಕರಿಗೆ ಸರ್ಕಾರದ ನಿಯಮಗಳನ್ನು ವಿವರಿಸುವ ಮೂಲಕ, ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಬಂದು, ಸರ್ಕಾರದ ನಿಯಮಾನುಸಾರ ಬಾಲ್ಯ ವಿವಾಹ ತಡೆಯುವಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಅವರು ವರದಿ ಸಂಗ್ರಹಿಸಿ, ವಿವಾಹವನ್ನು ತಡೆಯಲು ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಂಡು, ಸಂಬAಧಪಟ್ಟವರ ವಿರುದ್ಧ ಕಾನೂನಿನ ಕಠಿಣ ಕ್ರಮ ಹೇಗಾಗುತ್ತದೆ ಎಂದು ಪ್ರದರ್ಶಿಸಿದರು.
ಪೊಲೀಸ್ ಇಲಾಖೆ, ಮತ್ತು ಆಡಳಿತ ಮಂಡಳಿ ಅಧಿಕಾರಿಗಳ ಪಾತ್ರದಲ್ಲಿ ಎಲ್ಲರೂ ಬಾಲ್ಯ ವಿವಾಹ ತಡೆಯುವಲ್ಲಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು,
ಬಾಲಕಿಯ ಪಾತ್ರ: ಶಿಶು ಸ್ಥಿತಿಯಲ್ಲಿರುವ ಒಂದು ಬಡಕುಟುಂಬದ ಬಾಲಕನ ಪಾತ್ರದ ಮೂಲಕ, ಪೋಷಣೆ ಮತ್ತು ಆರೈಕೆಯ ಕೊರತೆಯು ಹೇಗೆ ಬಾಲ್ಯದ ಶ್ರೇಷ್ಠತೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದನ್ನು ತೋರಿಸಲಾಯಿತು.
ಮಾತೃ-ಪಿತೃ ಪಾತ್ರಗಳು: ಈ ಪೋಷಕರ ಪಾತ್ರವು ಮಕ್ಕಳ ಬೆಳವಣಿಗೆಗೆ ನೀಡುವ ಪ್ರಾಮುಖ್ಯತೆಯನ್ನು ಮತ್ತು ಹೆತ್ತವರ ಬಾಧ್ಯತೆಯನ್ನು ವಿಶದವಾಗಿ ಪ್ರತಿಪಾದಿಸಿತು. ಪೋಷಕರು ಮಕ್ಕಳಿಗೆ ತಿನ್ನಲು ಪೌಷ್ಟಿಕ ಆಹಾರ ನೀಡುವ ಮಹತ್ವವನ್ನು ಪ್ರದರ್ಶಿಸಿದರು.
ಸಮಾಜದ ಪಾತ್ರ: ಸಮಾಜದ ಪಾತ್ರದಲ್ಲಿ, ಸಮುದಾಯದ ಮುಂಚೂಣಿ ವ್ಯಕ್ತಿಗಳು ಮತ್ತು ಅಂಗನವಾಡಿ ಸಹಾಯಕರ ಪ್ರಭಾವವನ್ನು, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ರಕ್ಷಣೆಯಲ್ಲಿ ಏಳಿಗೆಯನ್ನು ತರುವುದು ಹೇಗೆ ಎಂಬುದನ್ನು ಒತ್ತಿಹೇಳಲಾಯಿತು.
ಈ ರೂಪಕವು ಪಾಲಕರು, ಪೋಷಕರು, ಮತ್ತು ಸಮಾಜದ ಸಮೂಹಗಳಿಗೆ ಪೋಷಣೆ, ಆರೋಗ್ಯ ಮತ್ತು ಸರಿಯಾದ ಜೀವನಮಟ್ಟದ ಜಾಗೃತಿ ನೀಡುವಂತಿತ್ತು, ಹಾಗೆಯೇ ಅಲ್ಲಿರುವ ಪ್ರೇಕ್ಷಕರ ಗಮನವನ್ನು ಸಂಪೂರ್ಣವಾಗಿ ಸೆಳೆದಿತ್ತು.