ಕನ್ನಡ ನಮ್ಮೆಲ್ಲರ ಉಸಿರಾಗಲಿ: ಛತ್ರೆ
ಭಾಲ್ಕಿ: ಅ.೫:ನಮ್ಮ ನಾಡ ನುಡಿ ಕನ್ನಡ ನಮ್ಮೆಲ್ಲರ ಉಸಿರಾಗಿಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಶಿವಶರಣಪ್ಪ ಛತ್ರೆ ಅಭಿಪ್ರಾಯಪಟ್ಟರು.
ಪಟ್ಟಣದ ದೇವಿನಗರದ ಭವಾನಿ ದೇವಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭಸವಭಾಗ್ಯ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗಡಿ ಭಾಗದಲ್ಲಿ ಕನ್ನಡ ಉಳಿಸಿ, ಬೆಳೆಸು ಕಾರ್ಯವಾಗಬೇಕಿದೆ. ಭಾಲ್ಕಿ ತಾಲೂಕಿನಲ್ಲಿ ಮರಾಠಿ ಮತ್ತು ಉರ್ದು ಭಾಷೆಗಳ ಪ್ರಾಬಲ್ಯವಿದೆ. ಇವುಗಳ ಮಧ್ಯ ಕನ್ನಡವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ.ಬಿ.ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಚಂದ್ರಶೇಖರ ಬಿರಾದಾರ ವಿಶೇಷ ಉಪನ್ಯಾಸ ಮಂಡಿಸಿದರು. ಕಸಾಪ ಕಾರ್ಯದರ್ಶಿ ಹಣಮಂತ ಕಾರಾಮುಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಕನ್ನಡ ಭಾಷೆಯಲ್ಲಿ ಪ್ರತಿಶತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗು ಶಿಕ್ಷಣ ಸೇವಾ ರತ್ನ ಪುರಸ್ಕೃತ ಪ್ರಾಚಾರ್ಯರಾದ ಪ್ರೊ| ಚಂದ್ರಕಾAತ ಬಿರಾದಾರ ಮತ್ತು ಪ್ರೋ| ಅಶೋಕ ರಾಜೋಳೆಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಹಣಮಂತರಾವ ಚವ್ಹಾಣ, ದೇವಿ ಮಂದಿರ ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ದಲೀಪ ಢವಳೆ, ಬಸವಭಾಗ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶೃತಿ ಸಂತೋಷ ಪಾಟೀಲ, ಕಸಾಪ ಉಪಾಧ್ಯಕ್ಷ ಕಾಶಿನಾಥ ಲದ್ದೆ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು
ಗಣಪತಿ ಭೂರೆ, ವೀರಣ್ಣಾ ಕುಂಬಾರ, ಕಾಶಿನಾಥ ಭೂರೆ, ವಿಜಯಕುಮಾರ ಹೂಗಾ, ಮಹೇಶ ಬನ್ನಾಳೆ, ಮಧುಕರ ಗಾಂವಕರ, ರಮೇಶ ಬರ್ಮಾ, ಎಸ್.ಕೆ.ದಾಮಾ, ಈಸಾ ಪಟೇಲ, ಸುನಿತಾ ಸಂಗೋಳಗೆ, ಮಾಯಾವತಿ ಗೋಖಲೆ, ಚೇತನಾ ಚನಶೆಟ್ಟಿ.