ತಿಡಗುಂದಿ ಶಾಖಾ ಕಾಲುವೆ ಕಾಮಗಾರಿಗೆ ಟೆಂಡರ್ ಕರೆಯಲು ಮನವಿ
ಸಂಜೆವಾಣಿ ವಾರ್ತೆ,
ವಿಜಯಪುರ,ಅ.೫:ತಿಡಗುಂದಿ ಬ್ರ‍್ಯಾಂಚ್ ಕಾಲುವೆ ಕಾಮಗಾರಿಗೆ ಟೆಂಡರ್ ಕರೆಯಲು ಕೃಷ್ಣ್ಣಾ ಜಲ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಿಗೆ ಬೆಂಗಳೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಭೀಮರಾಯ ಪೂಜಾರಿ, ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಪ್ಪ ಬಗಲಿ, ಪರಶುರಾಮ ಹಿರೇಕುರುಬರ, ಸುರೇಶ ರೇವತಗಾವ, ವಿಠ್ಠಲ ಬಿರಾದಾರ, ಗೋಪಾಲ ಶಿವಗದ್ದಿಗೆ, ರಾಜು ಅಂಗಡಿ, ತುಕಪ್ಪ ಬಸನಾಳ, ಮಲಕಪ್ಪ ಅಂಗಡಿ, ಅಶೋಕ ದಳವಾಯಿ ಮುಂತಾದವರು ಪಾಲ್ಗೊಂಡಿದರು.