ಡಾ. ಅಂಬೇಡ್ಕರ್‍ರವರ ಜಯಂತಿ ಆಚರಣೆ
ಹುಬ್ಬಳ್ಳಿ, ಏ15: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡ ಇಲ್ಲಿ ಡಾ. ಬಾಬಾ ಸಾಹೆಬ ಅಂಬೇಡ್ಕರ್ ರವರ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ನಳಿನಿ ಬೆಂಗೇರಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬೋಧಕ ಬೋಧಕೇತರ ಸಿಬ್ಬಂದಿಗಳು ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ನಳಿನಿ ಬೆಂಗೇರಿ ಭಾರತದ ಪ್ರತಿ ಪ್ರಜೆಯ ಕರ್ತವ್ಯ, ಅಧಿಕಾರಗಳನ್ನು ನಿರ್ದೇಶಿಸುವ ವಿಶ್ವದ ಬಹುದೊಡ್ಡ ಪ್ರಜಾ ಪ್ರಭುತ್ವದ ಬುನಾದಿ ಸಂವಿಧಾನ ನಿರ್ಮಾತೃ ಆಧುನಿಕ ಭಾರತದ ಪಿತಾಮಹ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗೋಣ ಎಂದು ಕರೆ ನೀಡಿದರು. ಮತ್ತೋರ್ವ ಉಪನ್ಯಾಸಕ ಡಾ.ಸಂಕ್ರೆಡ್ಡಿ ಮಾತನಾಡಿ ಡಾ.ಬಿ ಆರ್ ಅಂಬೇಡ್ಕರ್ ಒಬ್ಬ ಮಹಾನ್ ದಾರ್ಶನಿಕ ಮತ್ತು 200 ವರ್ಷಗಳ ಭವಿಷ್ಯದ ಘಟನೆಗಳ ಚಿಂತನೆಯ ಮೂಲಕ ಭಾರತೀಯ ಸಂವಿಧಾನವನ್ನು ರಚಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.