ವಿಶೇಷ ಉಪನ್ಯಾಸ
ಧಾರವಾಡ,ಏ15: ಜಾತಿ, ಧರ್ಮವನ್ನು ಮೀರಿ ಸಂವಿಧಾನವನ್ನು ನೋಡಿಕೊಂಡಾಗ ಮಾತ್ರ ಅದು ಒಳ್ಳೆಯ ಸಂವಿಧಾನ ಆಗಿರಲು ಸಾಧ್ಯವಾಗುವುದು ಎಂದು ಮಾನವ ಹಕ್ಕುಗಳ ತಜ್ಞ ಡಾ. ಲೋಹಿತ ನಾಯ್ಕರ ನುಡಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ 133 ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಅಂಬೇಡ್ಕರರ ಚಿಂತನೆಯಲ್ಲಿ ಚುನಾವಣೆ’ ವಿಷಯ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತಾ, ಸಂವಿಧಾನ ಯಾವಾಗಲೂ ಒಳ್ಳೆಯದಾಗಿಯೇ ಇದೆ. ಆದರೆ ಅದು ಯಾರ ಕೈಯಲ್ಲಿಇರುತ್ತದಯೋ ಹಾಗೆ ಇರುವುದು.ಒಳ್ಳೆಯವರ ಕೈಯಲ್ಲಿಇದ್ದರೆ ಒಳ್ಳೆಯದಾಗಿ ಇರುತ್ತದೆ.ಕೆಟ್ಟವರಕೈಯಲ್ಲಿಇದ್ದರೆಕೆಟ್ಟದಾಗಿರುತ್ತದೆ.ಮೂಲತಃಅಂಬೇಡ್ಕರ್‍ಅವರುಅಮೇರಿಕಾದಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿದ್ದರು.ಆರ್ಥಿಕವಾಗಿಅಸಮಾನತೆಇದ್ದಾಗ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಹಣಇದ್ದವರುಚುನಾವಣೆಗೆ ನಿಲ್ಲುತ್ತಾರೆ.ಆಳುವವರು ಮತ್ತು ಆಳಿಸಿಕೊಳ್ಳುವವರ ವ್ಯವಸ್ಥೆ ರೂಪಗೊಳ್ಳುತ್ತದೆ ಎಂದುಅಂಬೇಡ್ಕರ್‍ಅವರು ವಿಚಾರ ಹೊಂದಿದ್ದರು.ಆದರೆ ಸಂವಿಧಾನರಚನಾ ಕಾಲಕ್ಕೆ ಅಂಬೇಡ್ಕರ್ ವಿಚಾರಗಳಿಗೆ ವಿರೋಧ ವ್ಯಕ್ತವಾಗಿಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂವಿಧಾನ ರೂಪುಗೊಳ್ಳುವುದು.
ಸಂವಿಧಾನದ ಸೆಡ್ಯೂಲ್ 10 ಬದಲಿಸಿ 1991 ರಲ್ಲಿಎಂಟಿಡಿಫೆಕ್ಷೆನ್ ಲಾ ತಂದರು. ಒಂದು ವೇಳೆ ಡಾ.ಅಂಬೇಡ್ಕರ್‍ಅವರುಇದ್ದಿದ್ದರೆಇದನ್ನೂಒಪ್ಪುತ್ತಿರಲಿಲ್ಲ. ಸಂವಿಧಾನದಲ್ಲಿಚುನಾವಣಾಕಮೀಷನರ್‍ಅವರ ಸ್ಥಾನಮಾನ, ಅಧಿಕಾರ ಸರ್ವೋಚ್ಛ ನ್ಯಾಯಾಧೀಶರಿಗೆ ಸಮಾನವಾಗಿಇರುವಂತಹದ್ದು.ಆದರೆಇಂದುಚುನಾವಣಾಕಮೀಷನ್‍ರ ಸ್ಥಾನ-ಮಾನಅತ್ಯಂತಕೆಟ್ಟ ಸ್ಥಿತಿಗೆ ತರಲಾಗಿದೆ.
ಯಾವುದೇಒಬ್ಬ ವ್ಯಕ್ತಿಗೆಅಧಿಕಾರ ಮೀರಿ ಬಹಳಷ್ಟು ಅಧಿಕಾರಕೊಡಬಾರದು.ಮತ್ತುಒಂದೇ ವ್ಯಕ್ತಿಯ ಮೇಲೆ ಭರವಸೆಇಡಬಾರದು.ಆದರೆಅದು ಹಾಗಾಗುತ್ತಿಲ್ಲ. ಭಾರತೀಯಜನಾಂಗ ಭಕ್ತಿಪಥದಿಂದ ಬಂದವರಾಗಿದ್ದರಿಂದಅರಾಧನೆ ಮನೋಭಾವನೆಯಿಂದ ಹೊರಬರಲಿಕ್ಕೆಆಗಿಲ್ಲ. ಸಮಾಜವನ್ನು ಬಲಶಾಲಿ ಮಾಡಿದರೆ ಮಾತ್ರ ಸಂವಿಧಾನ ಉಳಿಯುವುದು ಎಂದರು.
ಕ.ವಿ.ವ.ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆತರುವ ವಿಚಾರ ಬಂದಾಗಅಂಬೇಡ್ಕರ್ ಮತ್ತುಗಾಂಧೀಯವರನ್ನುಒಟ್ಟಿಗೆಇಟ್ಟುಕೊಂಡುಚಿಂತಿಸಬೇಕುಎಂದರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯೊಂದಿಗೆಗೌರವ ಸಲ್ಲಿಸಲಾಯಿತು.
ವೇದಿಕೆ ಮೇಲೆ ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದ ಉಪಸ್ಥಿತರಿದ್ದರು.ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಡಾ.ಸಂಜೀವಕುಲಕರ್ಣಿ, ಗುರು ಹಿರೇಮಠ, ಡಾ.ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಶ್ರೀಮತಿ ವಿಶ್ವೇಶ್ವರಿ ಬ. ಹಿರೇಮಠ, ಡಾ.ಧನವಂತ ಹಾಜವಗೋಳ, ಹಾಗೂ ಶಿವಾನಂದ ಭಾವಿಕಟ್ಟಿ, ಪ್ರೊ. ಎಸ್. ಎಂ. ಕುಂದರಗಿ, ಎಂ. ಎಂ.ಚಿಕ್ಕಮಠ, ಎನ್. ಆರ್.ಬಾಳಿಕಾಯಿ, ರಾಜೇಂದ್ರ ಸಾವಳಗಿ, ಶ್ರೀಶೈಲಗೌಡ ಕಮತರ, ಬಸು ಪಟ್ಟಣ, ಆಶಾ ಸೈಯದ, ಶ್ರೀಮತಿ ಪ್ರತಿಭಾ ಸಂ.ಕುಲಕರ್ಣಿ ಹಾಗೂ ಬಾಲಬಳಗ ಶಾಲೆಯ ಶಿಕ್ಷಕರು ಸೇರಿದಂತೆಅನೇಕರು ಭಾಗವಹಿಸಿದ್ದರು.