ದೇವರ ದಾಸಿಮಯ್ಯ ಜಯಂತ್ಯೋತ್ಸವ
ಗುಳೇದಗುಡ್ಡ,ಏ15: ಲಿಂಗಭೇದ, ಅಸ್ಪೃಶ್ಯತೆ, ಮೇಲು-ಕೀಳು, ಜಾತಿ, ಮತ, ಪಂಥಗಳ ಭಾವನೆಗಳನ್ನು ತೊರೆದು ನಾವೆಲ್ಲ ಒಂದು ಎನ್ನುವ ಸಂದೇಶ ಸಾರಿದ ಆದ್ಯ ವಚನಕಾರ, ದೇವರ ದಾಸಿಮಯ್ಯ ಅವರು ಈ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೆಯವಾಗಿದೆ ಎಂದು ಶ್ರೀ ಜ. ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಶ್ರೀ ಜ. ಗುರುಸಿದ್ದೇಶ್ವರ ಬ್ರಹ್ಮಮಠದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತ್ಯೋತ್ಸವದ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಏಕತೆ ತರುವ ನಿಟ್ಟಿನಲ್ಲಿ ದೇವರ ದಾಸಿಮಯ್ಯ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದು. ಕಾಯಕ ಸಮಾಜದಲ್ಲಿ ಬೇಧ ಭಾವ ಇರಬಾರದು. ಅಂದಾಗ ಮಾತ್ರ ಸಮಾಜದಲ್ಲಿ ಏಕತೆ ಸಾಧಿಸುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರುಬಸವ ದೇವರು ಸಾನಿಧ್ಯ ವಹಿಸಿದ್ದರು. ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಈರಣ್ಣ ಶೇಖಾ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಕಲಬುರ್ಗಿ, ರಂಗಪ್ಪ ಶೇಬಿನಕಟ್ಟಿ, ಚಂದ್ರಶೇಖರ ಹೆಗಡೆ, ರವಿ ಅಲದಿ, ಭಾಗ್ಯಾ ಉದ್ನೂರ, ಗಿರಿಜಾ ಕಲ್ಯಾಣಿ, ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ, ಉಪನ್ಯಾಸಕಿ ಸರಿತಾ ಚಂದನವರ, ದೀಪಾ ಉಂಕಿ, ದ್ರಾಕ್ಷಾಯಣಿ ಗೊಬ್ಬಿ, ನಾಗವೇಣಿ ತಿಪ್ಪಾ ಇದ್ದರು.