ನಗರ ಕಾಂಗ್ರೆಸ್ ಸಮಿತಿಯಿಂದ ಅಂಬೇಡ್ಕರ್ ಗೆ ನಮನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 133 ನೇ ಜಯಂತೋತ್ಸವದ ಅಂಗವಾಗಿ ನಿನ್ನೆ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಲಾಯ್ತು.
ಈ ಸಂದರ್ಭದಲ್ಲಿ ನಗರ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್,  ಲಿಡ್ಕರ್ ಮಂಡಳಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಮುಂಡ್ರಿಗಿ ನಾಗರಾಜ್, ಜಿಲ್ಲಾ ಪಂಚಾಯತ್ ಮಾಜಿ  ಸದಸ್ಯ ಎ.ಮಾನಯ್ಯ, ಕಾಂಗ್ರೆಸ್  ಎಸ್.ಸಿ ವಿಭಾಗದ ಅಧ್ಯಕ್ಷ  ಯರಕುಲ ಸ್ವಾಮಿ, ಮುಖಂಡರಾದ ಗೋವರ್ಧನ್, ಗೋನಾಳ ನಾಗಭೂಷಣಗೌಡ  ಮತ್ತಿತರರು  ಉಪಸ್ಥಿತರಿದ್ದರು.