ಜಗತ್ತು ಕಂಡ ಜ್ಞಾನ ಸೂರ್ಯ ಡಾ.ಬಿ.ಆರ್.ಅಂಬೇಡ್ಕರ್ : ಕುಲಪತಿ ಪೆÇ್ರ.ಬಿ.ಎಸ್.ಬಿರಾದಾರ
ಬೀದರ:ಏ.15:ಜಗತ್ತು ಕಂಡಂತಹ ಮೇಧಾವಿ, ಚಿಂತಕ, ಸಮಾಜ ಸುಧಾರಕ, ಶೋಷಿತರ ಧ್ವನಿ, ಮಹಾಜ್ಞಾನಿ ಡಾ.ಭೀಮರಾವ ಅಂಬೇಡ್ಕರ್‍ರವರು ತಮ್ಮ ಜ್ಞಾನದಿಂದ ಇಡೀ ಜಗತ್ತು ಬೆಳಗಿದ ಜ್ಞಾನ ಸೂರ್ಯ. ಅವರ ವಿದ್ವತ್ತು ಇಡೀ ಜಗತ್ತು ಕೊಂಡಾಡುತ್ತಿದೆ. ಅವರ ವಿಚಾರಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಬಿ.ಎಸ್.ಬಿರಾದಾರರವರು ನುಡಿದರು. ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 133ನೆಯ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಅವರು ಮಾತನಾಡುತ್ತ ಡಾ.ಅಂಬೇಡ್ಕರ್‍ರವರು ಭಾರತ ಮಾತೆಯ ಹೆಮ್ಮೆಯ ಸುಪುತ್ರ. ಅವರಿಂದಾಗಿ ನಮ್ಮ ದೇಶಕ್ಕೆ ಅಗಾಧವಾದ ಕೀರ್ತಿ, ಪ್ರಸಿದ್ಧಿ ಬಂದಿದೆ. ಡಾ.ಅಂಬೇಡ್ಕರ್‍ರವರ ಅಧ್ಯಯನ, ಸಾಮಾಜಿಕ ಕಾಳಜಿ ಇಂದಿನ ಯುವಕರಿಗೆ, ವಿದ್ಯಾರ್ಥಿಗಳಿಗೆ ಸದಾ ಆದರ್ಶಪ್ರಾಯವಾಗಿದೆ. ಡಾ.ಅಂಬೇಡ್ಕರ್‍ರವರಿಗೆ ಇಷ್ಟವಾದ ಸ್ಥಳ ಗ್ರಂಥಾಲಯವಾಗಿತ್ತು, ದಿನದ ಹೆಚ್ಚಿನ ಸಮಯ ಅವರು ಗ್ರಂಥಾಲಯದಲ್ಲಿಯೇ ಕಳೆಯುತ್ತಿದ್ದರು ಹೀಗಾಗಿ ಅವರು ಜಗತ್ತಿನ ಮಹಾಜ್ಞಾನಿಯಾಗಲು ಸಾಧ್ಯವಾಯಿತು. ಅವರ ಆದರ್ಶಗಳು, ಜೀವನ ಮೌಲ್ಯಗಳು ಇಂದಿನ ಸಮಾಜಕ್ಕೆ ದಿವ್ಯ ಔಷಧಿಯಾಗಿವೆ, ಅವರ ಮಾರ್ಗದಲ್ಲಿ ನಡೆದರೆ ದೇಶವು ಅಭಿವೃದ್ಧಿ ಪಥದಲ್ಲಿ ನಡೆಯುತ್ತದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪೆÇ್ರ.ಪರಮೇಶ್ವರ ನಾಯಕರವರು ಮಾತನಾಡುತ್ತ ಡಾ.ಅಂಬೇಡ್ಕರ್‍ರವರ ಜೀವನದ ಅಧ್ಯಯನ ಇಂದಿನ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಬೇಕಾಗಿದೆ. ಅವರು ನಡೆದು ಬಂದ ದಾರಿ ಇವತ್ತಿನ ಯುವಜನಾಂಗಕ್ಕೆ ದಾರಿದೀಪವಾಗುತ್ತದೆ. ಜ್ಞಾನ ಯಾವುದೇ ಕಿಡಕಿಯಿಂದ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಬರಬೇಕಾಗಿದೆ. ಡಾ.ಅಂಬೇಡ್ಕರ್‍ರವರು ಅಪಾರ ಅಧ್ಯಯನ ಕೈಗೊಂಡು ಜಗತ್ತಿನ ಜ್ಞಾನವನ್ನು ಪಡೆದಂತೆ ಇಂದಿನ ವಿದ್ಯಾರ್ಥಿಗಳು ಅಂತಹ ಜ್ಞಾನವನ್ನು ಪಡೆಯಬೇಕಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬೀದರ ವಿಶ್ವವಿದ್ಯಾಲಯದ ಕುಲಸಚಿವರು ಆಡಳಿತ ಶ್ರೀಯುತ ಮಹ್ಮದ್ ಶಕೀಲ್‍ರವರು ಉಪಸ್ಥಿತರಿದ್ದರು. ಬೀದರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ.ವಿ.ಗಬಾಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ರಾಮಚಂದ್ರ ಗಣಾಪೂರರವರು ವಂದಿಸಿದರು. ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.