ನಟ ಪ್ರದೀಪ್ ನಿಧನ
ಬೆಂಗಳೂರು,ಏ.೧೫- ರಂಗಭೂಮಿ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದ ನಟ ಪ್ರದೀಪ್ (೭೩) ಹೃದಯಾಘಾತದಿಂದ ನಿಧನರಾಗಿದ್ದಾರೆ
ಕಳೆದ ೧೦ ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆ ಒಳಗಾಗಿದ್ದ ಪ್ರದೀಪ್ (ಸುಬ್ಬರಾಮು) ಅವರು ಅವರಿಗೆ ಸಂಜೆ ಮತ್ತೆ ಹೃದಯಾಘಾತಕ್ಕೆ ಒಳಗಾಗಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಗೆ ಇಂದು ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಳೆದ ೪ ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ನಟ ಪ್ರದೀಪ್ ಅವರು ತಮ್ಮ ಅದ್ಭುತ ನಟನೆಯಿಂದ ರಂಗಾಸಕ್ತರ ಗಮನ ಸೆಳೆದಿದ್ದರು.ನಾಳೆ ನಟ ಪ್ರದೀಪ್ ಅವರು ಅಂತ್ಯಕ್ರಿಯೆ ನಡೆಯಲಿದೆ. ಇವರು ರಂಗಭೂಮಿ ಹಾಗೂ ಕಿರುತೆರೆ ನಟಿಯಾದ ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ರಂಗಭೂಮಿಯ ಬೇಡಿಕೆ ಕಡಿಮೆಯಾದ ನಂತರ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳಲ್ಲಿ ಅವರು ಅಭಿನಯಿಸುತ್ತಿದ್ದರು. ಸಾಕ್ರೆಟೀಸ್, ಬಂಜೆತೊಟ್ಟಿಲು, ಸಾಯಿನಮನ ಇತ್ಯಾದಿ ನಾಟಕಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು