ಡಾ ರಾಜಕುಮಾರ ಸ್ಮರಣೆಯಿಂದ ಕನ್ನಡದ ಕಲೆ ವೈಭವದ ನೆನಪು
ವಿಜಯಪುರ.ಏ೧೫: ರಾಜಕುಮಾರ ಕನ್ನಡ ಸಿನಿಮಾ,ನಾಟಕ ,ಸಂಗೀತ ಎಲ್ಲ ವಿಭಾಗದ ಬಹುಶ್ರೇಷ್ಠ ಪ್ರತಿಭೆಯಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜೆ.ಎನ್. ಶ್ರೀನಿವಾಸ ತೀಳಿಸಿದರು.
ಅವರು ವಿಜಯಪುರ ಗಾಂಧಿಚೌಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಡಾ ರಾಜಕುಮಾರ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಸ್ಮರಣೆಯ ದಿನ ಪ್ರಯುಕ್ತ ಡಾ ರಾಜಕುಮಾರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಿದ್ದರು.
ಇದೆ ಸಂದರ್ಭ ಮಾತನಾಡಿದ ಜೆ ಸಿ ಸೀನಿಯರ್ ವಿಭಾಗದ ರಾಷ್ಟ್ರೀಯ ಉಪಾಧ್ಯಕ್ಷ ಡಾ ಶಿವಕುಮಾರ ಮಾತನಾಡಿ ರಾಜಕುಮಾರ ಕರ್ನಾಟಕ ಕಂಡ ಅತ್ಯಂತ ಸುಸಂಸ್ಕೃತ, ಸುಸಂಪನ್ನ, ಅಭಿನಯ ಚತುರ, ವಿನಯವಂತ ನಟ ಇಂದಿನ ಯುವ ಪೀಳಿಗೆಯ ನಟರುಗಳಿಗೆ ಮಾರ್ಗದರ್ಶಕರು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ ರಾಜಕುಮಾರ ಕಲೆಯ ವೈಭವ ಸಾರಿದರೆ, ವಿಶ್ವೇಶ್ವರಯ್ಯ ಕನ್ನಡ ನಾಡಿನ ದೂರದೃಷ್ಟಿಯ ವೈಚಾರಿಕ ಚಿಂತನೆಯ ಇಂಜನಿಯರ್ ಆಗಿ ಮೆರೆದರು. ಕಾರ್ಖಾನೆ,ನಿರಾವರಿ,ಸಾಹಿತ್ಯ ಎಲ್ಲ ವಿಭಾಗದ ಬಹುಶ್ರೇಷ್ಠ ಪ್ರತಿಭೆಯ ಯಾಗಿ ಕನ್ನಡ ನಾಡು ಕಟ್ಟುವ ಕಾರ್ಯ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರಾದ ಕೇಶವಪ್ಪ ಮಾತನಾಡಿ ಡಾ ರಾಜಕುಮಾರ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಇಬ್ಬರು ಕನ್ನಡ ನಾಡಿನ ಪ್ರಾತಃಸ್ಮರಣೀಯರು ಎಂದರು.
ನಿವೃತ್ತ ಶಿಕ್ಷಕ ಕೆ.ಹೆಚ್.ಚಂದ್ರಶೇಖರ್ ಎಲ್ಲರನ್ನು ಸ್ವಾಗತಿಸಿದರು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಕಾರ್ಯದರ್ಶಿ ಪರಮೇಶಯ್ಯ ಹಾಜರಿದ್ದರು ಕನ್ನಡ ಕಲಾವಿರ ಸಂಘದ ಕಲಾವಿದ ನಾರಾಯಣಸ್ವಾಮಿ ಪುರಸಭಾ ಸದಸ್ಯ ಸಿ.ಎಂ.ರಾಮು ಮತ್ತಿತರರು ಹಾಜರಿದ್ದರು.