10ಲಕ್ಷ ಸಾಲ ಪಡೆದು ವಂಚನೆ: ದೂರು ದಾಖಲು
ಸಂಜೆವಾಣಿ ನ್ಯೂಸ್
ಮೈಸೂರು.ಏ.15:- ಕೃಷಿ ಉತ್ಪನ್ನಗಳನ್ನು ರಫ್ತು ಮಾಡಿ ಅದರಿಂದ ಹೆಚ್ಚಿನ ಹಣ ಸಂಪಾದಿಸಿ ನಿನಗೆ ಹೆಚ್ಚಿನ ಹಣ ಸೇರಿಸಿ ಕೊಡುವುದಾಗಿ ಹೇಳಿ 10ಲಕ್ಷ ರೂ. ಸಾಲ ಪಡೆದು ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ಮಂಡಿ ಪೆÇಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ.
ಹುಣಸಕುಪ್ಪೆ ಮುಖ್ಯರಸ್ತೆ ಪಿರಿಯಾಪಟ್ಟಣದ ನಿವಾಸಿಯಾದ ಪಿ.ಎಂ.ಕಿರಣ್() ಎಂಬುವವರೆ ಆರ್.ಶ್ರೀನಿವಾಸ್ ಐಪಿಎಸ್ ನಗರದ ಹರ್ಷ ಎಂಬುವವರಿಂದ ಹಣ ಪಡೆದು ವಂಚಿಸಿದವರಾಗಿದ್ದಾರೆ.
ಇಬ್ಬರೂ ಖಾಸಗಿ ಕಾಲೇಜಿನಲ್ಲಿ ಸ್ನೇಹಿತರಾಗಿದ್ದು ಪರಸ್ಪರ ಹಣದ ವ್ಯವಹಾರ ನಡೆಸುತ್ತಿದ್ದರೆನ್ನಲಾಗಿದೆ. ಅಂತೆಯೇ 90ಸಾವಿರ ರೂ. ಹಣವನ್ನು ಹರ್ಷರಿಂದ ಕಿರಣ್ ಪಡೆದು ವಾಪಾಸ್ ನೀಡಿರುವುದಿಲ್ಲ.
ಇದರೊಟ್ಟಿಗೆ ಮಾ.22ರಂದು ಮತ್ತೆ ಕಿರಣ್ ಕರೆ ಮಾಡಿ ಸಕಲೇಶಪುರದಲ್ಲಿರುವ ಏಲಕ್ಕಿಯನ್ನು ತಮಿಳುನಾಡಿನ ಇರೋಡ್‍ಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ. ಇದಕ್ಕಾಗಿ 10ಲಕ್ಷ ರೂ.ಗಳನ್ನು ನೀನು ಕೊಟ್ಟರೆ ಎಲಕ್ಕಿ ಮಾರಿ 1ಲಕ್ಷ ಹೆಚ್ಚುವರಿ ಸೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಅದರಂತೆ ಬ್ಯಾಂಕ್ ಖಾತೆ ಮೂಲಕ ಹರ್ಷ 9 ಲಕ್ಷ ಹಾಗೂ 1ಲಕ್ಷ ನಗದನ್ನು ನೀಡಿದ್ದಾರೆ. ಅದಾದ ಬಳಿಕ ನೀಡಿದ ಹಣವನ್ನು ಇದುವರೆವಿಗೂ ಹಿಂದುರುಗಿ ಕಿರಣ್ ಕೊಟ್ಟಿಲ್ಲವೆಂದು ದೂರುದಾರರಾದ ಹರ್ಷ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮಂಡಿ ಠಾಣೆ ಪೆÇಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.