ಜಾತಿ, ಹೆಣ ಹಾಗೂ ಹೆಂಡ ಬಲದಿಂದ ಚುನಾವಣೆ ಗೆಲ್ಲಲು ಹೊರಟಿದೆ
ಸಂಜೆವಾಣಿ ನ್ಯೂಸ್
ಮೈಸೂರು.ಏ.15:- 28ನ್ನು ಮೋದಿಯವರಿಗೆ ಗೆದ್ದು ಕೊಡುತ್ತೇವೆ. ಇದೆಲ್ಲಕ್ಕೂ ಉತ್ತರವನ್ನು ಗೆಲುವಿನ ಮೂಲಕ ಕೊಡುತ್ತೇವೆ. ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾಗುತ್ತದೆ. ಅದಕ್ಕಾಗಿ ಮನ ಬಂದಂತೆ ಮಾತನಾಡುತ್ತಿದ್ದಾರೆಂದರು.
ಒಕ್ಕಲಿಗರು ರಾಜರನ್ನೇ ಬೆಂಬಲಿಸುವರು: ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಯನ್ನು ಒಕ್ಕಲಿಗ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಒಕ್ಕಲಿಗರು ಸದಾ ಮೈಸೂರು ರಾಜವಂಶಸ್ಥರಿಗೆ ಬೆಂಬಲ ನೀಡುತ್ತಾ ಬಂದವರು ಎಂಬುದನ್ನು ಯಾರೂ ಮರೆಯಬಾರದು. ಮೈಸೂರು ರಾಜಮನೆತನದ ಬಗ್ಗೆ ಒಕ್ಕಲಿಗರಿಗೆ ಅಪಾರ ಗೌರವವಿದೆ.
ಈ ಬಾರಿಯೂ ಯದುವೀರ್ ಅತ್ಯಧಿಕ ಮತಗಳಿಂದ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.ವಿರೋಧ ಪಕ್ಷದ ನಾಯಕ ಆರ್.ಆಶೋಕ್, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕರಾದ ಹರೀಶ್ ಗೌಡ, ಶ್ರೀವತ್ಸ, ಮಾಜಿ ಸಂಸದರಾದ ಸುಮಲತಾ,ಪ್ರತಾಪಸಿಂಹ, ಮಾಜಿ ಶಾಸಕರಾದ ಎಸ್.ಎ.ರಾಮದಾಸ್, ಹರ್ಷವರ್ಧನ್, ಅಶ್ವಿನ್ ಕುಮಾರ್, ಪ್ರೀತಂಗೌಡ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ,